Kannada NewsKarnataka News

ಖಾನಾಪುರ: ಲಂಚಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಇಬ್ಬರು ಪೊಲೀಸರು ಸೇರಿ ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಬ್ಲ್ಯಾಕ್ ಮೇಲ್ ಮಾಡಿ ಲಂಚ ಪಡೆಯಲು ಯತ್ನಿಸಿದ ಇಬ್ಬರು ಪೊಲೀಸರು ಮತ್ತು ಅವರ ಪರವಾಗಿ ಲಂಚದ ಹಣ ಸ್ವೀಕರಿಸಿದ ಇಬ್ಬರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ

ದಿನಾಂಕ. ೧೭.೦೧.೨೦೨೨ ರಂದು ಪಿರ್ಯಾದಿ  ಪರಶುರಾಮ ವಿಠ್ಠಲ ಗಾಡಿವಡ್ಡರ ಸಾ: ರಾಮನಗರ ಬೆಳಗಾವಿ ಇವರು ಬೆಳಗಾವಿ ಎಸಿಬಿ ಪೊಲೀಸ್ ಠಾಣೆಗೆ ಹಾಜರಾಗಿ  ತಾನು ಮತ್ತು ಸ್ನೇಹಿತ ಮಹೇಶ ಶೇಟ್ಟೆಪ್ಪಾ ಗಾಡಿವಡ್ಡರ ಬೇರೆ ಕೆಲಸದ ನಿಮಿತ್ಯ ಖಾನಾಪುರಕ್ಕೆ ಹೋಗಿ ಬ್ಲೂಸ್ಟಾರ್ ಹೊಟೇಲ್ ಹತ್ತಿರ ನಿಂತಿದ್ದೆವು.  ಅಲ್ಲಿಗೆ ಬಂದ ಪೊಲೀಸರಾದ ಸಿದ್ದು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ  ವಿನಾಕಾರಣ   ನೀವು ಓ.ಸಿ ಆಡುತ್ತೀರಿ ಎಂದು ಹೇಳಿ ಮೊಬೈಲನ್ನು ಪಡೆದು ಹೆದರಿಸಿದರು.

ಠಾಣೆಯಲ್ಲಿ ಕೇಸ್ ದಾಖಲಾದರೆ ೫೦.೦೦೦/- ರೂ, ಆಗುತ್ತದೆ. ಈಗಲೇ ೧೦.೦೦೦/- ರೂ, ನೀಡಿದಲ್ಲಿ ಮೊಬೈಲ್ ಕೊಡುವುದಾಗಿ ತಿಳಿಸಿದ್ದರು. ಬುಧವಾರ ೧೫.೦೦೦/- ಲಂಚ ನೀಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬಿ. ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ,  ಮಾರ್ಗದರ್ಶನದಲ್ಲಿ ಜೆ.ಎಮ್ ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಠಾಣೆ ದಾಖಲಿಸಿಕೊಂಡಿ, ಎ.ಎಸ್ ಗುದಿಗೊಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ  ಹೆಚ್.ಸುನೀಲ್‌ಕುಮಾರ, ಪೊಲೀಸ್ ಇನ್ಸ್‌ಪೆಕ್ಟರ್, ಹಾಗೂ ಬೆಳಗಾವಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿದರು.

ಸಿದ್ದು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ಸೂಚನೆಯ ಮೇರೆಗೆ ಸಾಗರ ಮಾರುತಿ ಅಷ್ಟೇಕರ ಸಾ. ಗಾಂಧಿನಗರ ಹಾಗೂ  ತೌಸೀಫ್ ಮಹ್ಮದ ಜಾಫರ್ ಚಾಂದಖಾನವರ ಸಾ. ಗಾಂಧಿನಗರ ಖಾನಾಪುರ ಇವರು ಪಿರ್ಯಾದಿಯಿಂದ ೧೫,೦೦೦/- ಲಂಚದ ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು. ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮರಕ್ಕೆ ಕಾರು ಡಿಕ್ಕಿ : ಸ್ಥಳದಲ್ಲೇ ಮಹಿಳೆ ಸಾವು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button