ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೊರೊನಾ ಸೋಂಕಿನಿಂದಾಗಿ ಸಭೆ-ಸಮಾರಂಭಗಳಲ್ಲಿ ನೀರಿನ ಬಾಟಲಿಗಳ ಜೊತೆಗೆ ಸ್ಯಾನಿಟೈಸರ್ ಇಡುವುದೂ ಕಡ್ಡಾಯವಾಗಿದೆ. ಸಭೆಯೊಂದರಲ್ಲಿ ಭಾಗವಹಿಸಿದ್ದ ಅಧಿಕಾರಿ ನೀರು ಎಂದು ಭಾವಿಸಿ ಸ್ಯಾನಿಟೈಸರ್ ನ್ನು ಕುಡಿದ ಘಟನೆ ಮುಂಬೈಯಲ್ಲಿ ನಡೆದಿದೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಜಂಟಿ ಕಮಿಷನರ್ ರಮೇಶ್ ಪವಾರ್ ನಗರಿಕ ಸಂಸ್ಥೆಯ ವಾರ್ಷಿಕೋತ್ಸವ ಬಜೆಟ್ ಸಭೆಯಲ್ಲಿ ನೀರು ಎಂದು ಹ್ಯಾಂಡ್ ಸ್ಯಾನಿಟೈಸರ್ ಕುಡಿದಿದ್ದಾರೆ.
ತಮ್ಮ ಭಾಷಣಕ್ಕೂ ಮೊದಲು ಅಧಿಕಾರಿ ನೀರು ಕುಡಿಯಲೆಂದು ಟೇಬಲ್ ಮೇಲಿದ್ದ ಬಾಟಲಿ ತೆಗೆದು ಕುಡಿದಿದ್ದಾರೆ. ಸಿಬ್ಬಂದಿ ತಡೆಯಲು ಮುಂದಾಗುವಷ್ಟರಲ್ಲಿ ಸ್ಯಾನಿಟೈಸರ್ ಬಾಯಿಗೆ ಹಾಕಿದ್ದಾರೆ. ತಕ್ಷಣ ಗೊತ್ತಾಗಿ ಉಗುಳಿದ್ದಾರೆ. ಬಳಿಕ ಬಾಯಿ ಶುಚಿಗೊಳಿಸಿಕೊಂಡು ವಾಪಸ್ ಸಭೆಗೆ ಹಾಜರಾಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ