Kannada NewsKarnataka NewsLatest
*BREAKING: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ: ಕುಸಿದು ಬಿದ್ದು ಸಾವು*

ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ಬಸ್ ನಲ್ಲಿಯೇ ಬಿಎಂಟಿಸಿ ಬಸ್ ಚಾಲಕನಿಗೆ ಹೃದಯಾಘಾತವಾಗಿರುವಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ. ಏಕಾಏಕಿ ಹೃದಯಾಘಾತವಾಗಿ ಸ್ಟೇರಿಂಗ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅಷ್ಟರಲ್ಲಾಗಲೇ ಚಾಲಕ ಸಾವನ್ನಪ್ಪಿದ್ದರು. ಚಿಕ್ಕಬಳ್ಳಾಪುರ ಮೂಲದ ನಾರಾಯಣಪ್ಪ ಹೃದಯಾಘಾತಕ್ಕೆ ಬಲಿಯಾದ ಚಾಲಕ.