
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ವತಿಯಿಂದ ಬಿಡುಗಡೆಯಾದ 1 ಕೋಟಿ ರೂ. ಗಳಲ್ಲಿ ಸಮರ್ಥ ನಗರದ 2, 4, 5ನೇ ಕ್ರಾಸ್ ನಲ್ಲಿ ಸಿ.ಸಿ. ರೋಡ್ ನಿರ್ಮಾಣಕ್ಕೆ ಇಂದು ಶಾಸಕರಾದ ಅನಿಲ ಬೆನಕೆ ಅವರಿಂದ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತಾ ಸಮರ್ಥ ನಗರದಲ್ಲಿ ಜನರ ಬಹುದಿನಗಳ ಬೇಡಿಕೆ ಮೇರೆಗೆ ಇಂದು ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ, ಅದರಂತೆಯೇ ಇನ್ನು ಒಂದಿಷ್ಟು ರಸ್ತೆಗಳು, ಡ್ರೈನೆಜ ಕಾಮಗಾರಿ ಸೇರಿದಂತೆ ಜನೋಪಯೋಗಿ ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಕೈಗೋಳ್ಳಲಾಗುವುದು, ಜನರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಹಾಗೂ ಸಮರ್ಥ ನಗರದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಈ ವೇಳೆ ರಾಹುಲ ಮುಚ್ಚಂಡಿ, ವಿನೋದ ಪುಜಾರಿ, ರಾಹುಲ ಕಾಕತಿಕರ, ಸೇರಿದಂತೆ ಸಮರ್ಥ ನಗರದ ಗುರು ಹಿರಿಯರು ಉಪಸ್ಥಿತರಿದ್ದರು.