National

*BMW ಕಾರು ಅಪಘಾತಕ್ಕೆ ಮಹಿಳೆ ಸಾವು ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಐಷಾರಾಮಿ BMW ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ಮುಂಬೈನ ವರ್ಲಿ ಪ್ರದೇಶದ ಏಟ್ರಿಯಾ ಮಾಲ್ ಬಳಿ ಜುಲೈ 7ರಂದು ಮುಂಜಾನೆ ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದ ಮಿಹಿರ್ ಶಾ, ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆ ಕಾವೇರಿ ನಖ್ವಾ ಸಾವನ್ನಪ್ಪಿದ್ದರು. ಮಹಿಳೆಯ ಪತಿ ಪ್ರದೀಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದ ಬಳಿಕ ಮಿಹಿರ್ ಶಾ ಕಾರಿನ ಸಮೇತ ಪರಾರಿಯಾಗಿದ್ದ. ಮಿಹಿರ್ ಶಾ ಶಿವಸೇನೆ ನಾಯಕ ರಾಜೇಶ್ ಶಾ ಪುತ್ರನಾಗಿದ್ದು, ಪ್ರಕರಣ ಸಂಬಂಧ ಮಿಹಿರ್ ತಂದೆ ರಾಜೇಶ್ ಹಾಗೂ ಕಾರು ಚಾಲಕನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ರಾಜೇಶ್ ಜಾಮೀನು ಪಡೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ಮಿಹಿರ್ ಶಾ ನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.


Related Articles

Back to top button