*ಪೊಲೀಸರ ಜೊತೆ ಮಂಡಳಿಯ ವಾಗ್ವಾದ: ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಚವ್ಹಾಟ್ ಗಲ್ಲಿಯ ಗಣಪತಿ ವಿಸರ್ಜನೆಗೆ ತೆರಳಿದ ವೇಳೆ ಗಣೇಶನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಂದು ಕ್ಷಣ ಬಿಗುವಿನ ವಾತಾವರಣ ನಿರ್ಮಾಣವಾಗಿ, ಈಗ ಸಹಜ ಸ್ಥಿತಿಗೆ ಬಂದಿದೆ.
ಬೆಳಗಾವಿ ನಗರದಲ್ಲಿ ನಿನ್ನೆ ತಡರಾತ್ರಿ ಚಾಕು ಇರತವಾದ ಬಳಿಕ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ನಿಯೋಜನೆ ಮಾಡಲಾಗಿದೆ. ನಿನ್ನೆ ಸಾಯಂಕಾಲದಿಂದಲೆ ಗಣಪನ ವಿಸರ್ಜನಾ ಕಾರ್ಯ ನಡೆಯುತ್ತಿದೆ. ಬೆಳಗಾವಿ ನಗರದ ಚವ್ಹಾಟ್ ಗಲ್ಲಿಯ ಗಣಪನೆಗೆ ವಿಸರ್ಜನೆ ತಡವಾಗಿ ತೆರಳಿದ್ದಕ್ಕೆ ಬೆಳಗಾವಿ ಪೊಲೀಸರು ತಡೆದ ಘಟನೆ ನಡೆದಿದೆ. ರಾತ್ರಿಯೇ ವಿಸರ್ಜನೆಗೆ ತೆರಳಬೇಕಿತ್ತು. ಬೆಳಗ್ಗೆ ಏಕೆ ವಿಸರ್ಜನೆಗೆ ತೆರಳುತ್ತಿದ್ದಿರಿ, ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೆ ಎಂದು ಪೊಲೀಸರು ತಡೆದಿದ್ದಾರೆ. ಆದರೆ ಪೊಲೀಸರ ನಡೆ ಖಂಡಿಸಿ ಬೆಳಗಾವಿಯ ಚವ್ಹಾಟ್ ಗಲ್ಲಿ ಗಣೇಶೋತ್ಸವ ಮಂಡಳಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣಪತಿ ಮೂರ್ತಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿವರ್ಷ ಹೋಗುವ ಮಾರ್ಗವಾದ ಖಡಕ್ ಗಲ್ಲಿ, ಬಡಕಲ್ ಗಲ್ಲಿ, ಶೆಟ್ಟಿ ಗಲ್ಲಿ ಮೂಲಕ ತರಳಲು ಅವಕಾಶ ಕೊಡುವಂತೆ ಗಣೇಶ ಮಂಡಳಿ ಸದಸ್ಯರು ಪಟ್ಟು ಹಿಡಿದಿದ್ದರು.
ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಡಿಸಿಪಿ ರೋಹನ್ ಜಗದೀಶ್ ಆಗಮಿಸಿ, ಗಣೇಶೋತ್ಸವ ಮಂಡಳಿ ಮನವೊಲಿಸಲು ಯತ್ನಿಸಿದ್ದು. ಗಣೇಶ ಮಂಡಳಿಯ ಯುವಕರು ಪೊಲೀಸರ ಜೊತೆ ವಾಗ್ವಾದ ನಡೆದ್ದರು. ಬಳಿಕ ಮಂಡಳಿಯವರು ಹೇಳಿದ ಮಾರ್ಗದ ಮೂಲಕ ತೆರಳಿ ವಿಸರ್ಜನೆಗೆ ಅನುವು ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ