National

*ದಂಪತಿ ಹಾಗೂ ಮೂರು ಮಕ್ಕಳ ಶವ ಬೆಡ್ ನಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ : ದಂಪತಿಗಳು ಹಾಗೂ ಮೂರು ಮಕ್ಕಳ ಶವಗಳು ಬೆಡ್ ಬಾಕ್ಸ್ ನಲ್ಲಿ ಪತ್ತೆಯಾಗಿರುವ ಭೀಕರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. 

ಈ ಘಟನೆಯು ಗುರುವಾರ ರಾತ್ರಿ ನಡೆದಿದ್ದು ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಮೊಯೀನ್ ಹಾಗೂ ಅವರ ಪತ್ನಿ ಅಸ್ಮಾಮತ್ತು ಮಕ್ಕಳಾದ ಆಫ್ಘಾ(8), ಅಝೀಜಾ (4) ಹಾಗೂ ಅಬೀಬಾ(1) ಮೃತ ದುರ್ದೈವಿಗಳು.

Home add -Advt

ಗಾರೆಕೆಲಸದ ವೃತ್ತಿಯಲ್ಲಿದ್ದ ಮೊಯೀನ್ ತನ್ನ ಕುಟುಂಬದೊಡನೆ ಸೊಹೇಲ್ ಗಾರ್ಡನ್ ನಲ್ಲಿ ವಾಸಿಸುತ್ತಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ನಡೆಸಿರಬಹುದೆಂದು ಶಂಕಿಸಲಾಗಿದೆ. ಲಿಸಾಡಿ ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಫ್‌ಎಸ್ಎಲ್ ಟೀಂ ಸಹ ಜೊತೆಯಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕುತಿದ್ದು, ಶೀಘ್ರದಲ್ಲಿಯೇ ಕೊಲೆಗಾರರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Related Articles

Back to top button