Latest

ವಿಕಿ ಜತೆಗಿನ ಅನಿರೀಕ್ಷಿತ ಪ್ರೇಮ ಪ್ರಸಂಗ ಹಂಚಿಕೊಂಡ ಕತ್ರಿನಾ

 ಪ್ರಗತಿವಾಹಿನಿ ಸುದ್ದಿ, ಮುಂಬೈ: “ನನಗೆ ವಿಕಿ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಮೊದಲ ಬಾರಿ ಭೇಟಿಯಲ್ಲೇ ನಾನು ಗೆದ್ದಿದ್ದೇನೆ..” ಹೀಗಂತ ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಪ್ರೇಮಾನುಭವ ಹೇಳಿಕೊಂಡಿದ್ದಾರೆ.

ಕಾಫಿ ವಿತ್ ಕರಣ್ ನಲ್ಲಿ ತಮ್ಮ ಹಾಗೂ ಪತಿ ವಿಕಿ ಕೌಶಲ್ ಬಗ್ಗೆ ಹೇಳಿಕೊಂಡಿರುವ ಅವರು ತಮ್ಮಿಬ್ಬರ ಭೇಟಿ ಅನಿರೀಕ್ಷಿತ ಎಂದಿದ್ದಾರೆ.

Home add -Advt

“ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅವರ ಹೆಸರನ್ನಷ್ಟೇ ಕೇಳಿದ್ದೆ” ಎಂದಿರುವ ಕತ್ರಿನಾ, ತಾವು ಶೋಯೆಬ್ ಅಖ್ತರ್ ಅವರ ಪಾರ್ಟಿಯಲ್ಲಿ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು ಶೀಘ್ರವೇ ಇಬ್ಬರೂ ಡೇಟಿಂಗ್ ಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಭೇಟಿ ಅನಿರೀಕ್ಷಿತವಷ್ಟೇ ಅಲ್ಲ, ‘Out of blue’ ಎಂದು ಸಹ ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ವಿಕಿ- ಕತ್ರಿನಾ ಅವರದು ಲವ್ ಎಟ್ ಫಸ್ಟ್ ಸೈಟ್ ಎಂಬುದಾಗಿ ಅವರು ಬಿಂಬಿಸಿದ್ದಾರೆ.

ಜಾಲತಾಣದಲ್ಲಿ ವೈರಲ್ ಆಯಿತು ಭಾರೀಪ್ರಮಾಣದ ಟ್ರಾಫಿಕ್ ಜಾಮ್

 

Related Articles

Back to top button