Latest

ಬಾಲಿವುಡ್ ಮಾಫಿಯಾ ವಿರುದ್ಧ ಸಿಡಿದೆದ್ದ ತನುಶ್ರೀ ದತ್ತ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ಮಾಫಿಯಾ ತಮ್ಮನ್ನು ತೀರ ಕೆಟ್ಟ ರೀತಿಯಲ್ಲಿ ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದೆ ಎಂದು ನಟಿ ತನುಶ್ರೀ ದತ್ತ ದೂರಿದ್ದಾರೆ.

“ಇವರ ಕಿರುಕುಳದಿಂದ ನಾನೇನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ನನ್ನ ವೃತ್ತಿ ಜೀವನವನ್ನು ಇನ್ನಷ್ಟು ಪ್ರಖರಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

“ಬಾಲಿವುಡ್ ಮಾಫಿಯಾ, ಹಳೆಯ ರಾಷ್ಟ್ರದ್ರೋಹಿ ಕ್ರಿಮಿನಲ್ ಶಕ್ತಿಗಳು ಹಾಗೂ ಮಹಾರಾಷ್ಟ್ರದ ಹಳೆಯ ರಾಜಕೀಯ ವಲಯ ಇದರಲ್ಲಿ ಶಾಮೀಲಿದೆ.  ಇಂಥ ಕಿರುಕುಳ ನೀಡುವ ಕೃತ್ಯದ ಹಿಂದೆ #metoo ಅಪರಾಧಿ ಗುಂಪು ಇದೆ” ಎಂದು ತನುಶ್ರೀ ಆರೋಪಿಸಿದ್ದಾರೆ. 

2018ರಲ್ಲಿ ತನುಶ್ರೀ ಬಾಲಿವುಡ್ ನ ಕೆಲ ಸೆಲೆಬ್ರಿಟಿಗಳ ವಿರುದ್ಧ ಬಹಿರಂಗವಾಗಿ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿದ್ದಂತೆ ದೇಶಾದ್ಯಂತ ಮೀ ಟೂ ಚಳವಳಿ ವೇಗ ಪಡೆದಿತ್ತು. 

ಆಕಾಶ್ ಏರ್ ನೂತನ ವಿಮಾನ ಹಾರಾಟ; ಟಿಕೆಟ್ ಬುಕ್ಕಿಂಗ್ ಆರಂಭ

Related Articles

Back to top button