Film & EntertainmentKannada NewsKarnataka NewsLatest

*ಬಾಲಿವುಡ್ ನಟರಿಗೆ ಭೂಗತ ಲೋಕದ ಬೆದರಿಕೆ*: *ಇಬ್ಬರು ಬಿಟೌನ್ ಸ್ಟಾರ್‌ಗಳಿಗೆ ಹೆಚ್ಚಿದ ಭದ್ರತೆ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಮೇಲೆ ಭೂಗತ ಲೋಕದ ಕರಿನೆರಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖ್ಯಾತ ನಟರ ಮನೆಗಳು ಮತ್ತು ಹೋಟೆಲ್‌ಗಳ ಮೇಲೆ ಗುಂಡಿನ ದಾಳಿಗಳು ನಡೆಯುತ್ತಿವೆ. ಸಲ್ಮಾನ್ ಖಾನ್‌ಗೆ ಹಲವು ಬಾರಿ ಬೆದರಿಕೆ ಬಂದಿದ್ದರೆ, ದಿಶಾ ಪಟಾನಿ ಮತ್ತು ರೋಹಿತ್ ಶೆಟ್ಟಿ ಮನೆಗಳ ಮೇಲೂ ದಾಳಿ ನಡೆದಿದೆ. ಇತ್ತೀಚೆಗೆ ಟೈಗರ್ ಶ್ರಾಫ್ ಮೇಲಿನ ದಾಳಿ ಬಳಿಕ ಮತ್ತಷ್ಟು ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ನಟರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ಬಳಿಕ ನಟರಾದ ಟೈಗರ್ ಶ್ರಾಫ್ ಮತ್ತು ಆಮಿರ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಆಮಿರ್ ಖಾನ್ ಅವರಿಗೆ ಎಕ್ಸ್ ಕೆಟಗರಿ ಭದ್ರತೆ ನೀಡಲಾಗುತ್ತಿತ್ತು. ಆದರೆ ಆರೋಪಿಗಳ ವಿಚಾರಣೆ ವೇಳೆ ಆಮಿರ್ ಖಾನ್ ಕೂಡ ದುಷ್ಕರ್ಮಿಗಳ ಗುರಿಯಾಗಿದ್ದರು ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಶಾರುಖ್ ಖಾನ್ ಅವರಿಗೂ ಇದೇ ಮಟ್ಟದ ಭದ್ರತೆ ಇದೆ. ಅಮಿತಾಭ್ ಬಚ್ಚನ್ ಅವರಿಗೆ ಎಕ್ಸ್ ಕೆಟಗರಿ ಭದ್ರತೆ ನೀಡಲಾಗಿದೆ. ಬಾಲಿವುಡ್‌ನ ಹಲವು ಪ್ರಮುಖ ನಟರು ಮತ್ತು ನಿರ್ದೇಶಕರಿಗೂ ಸರ್ಕಾರದಿಂದ ಭದ್ರತೆ ಒದಗಿಸಲಾಗುತ್ತಿದೆ.

ವೈ ಪ್ಲಸ್ ಭದ್ರತೆಯಲ್ಲಿ ಏನಿರುತ್ತದೆ?

ಸರ್ಕಾರದ ಭದ್ರತಾ ವ್ಯವಸ್ಥೆಯಲ್ಲಿ ಎಸ್‌ಪಿಜಿ, ಝೆಡ್ ಪ್ಲಸ್, ಝೆಡ್ ಮತ್ತು ವೈ ಪ್ಲಸ್ ಸೇರಿದಂತೆ ವಿವಿಧ ಹಂತಗಳಿವೆ. ವೈ ಪ್ಲಸ್ ಭದ್ರತೆಯಲ್ಲಿ ಸುಮಾರು 12 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗುತ್ತಾರೆ. ಇವರಲ್ಲಿ ನಾಲ್ವರು ಶಸ್ತ್ರಸಜ್ಜಿತ ಕಮಾಂಡೊಗಳಾಗಿರುತ್ತಾರೆ.

ಯಾರೆಲ್ಲರಿಗೆ ಸರ್ಕಾರಿ ಭದ್ರತೆ?

ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್, ಅಮಿತಾಭ್ ಬಚ್ಚನ್ ಮಾತ್ರವಲ್ಲದೆ ಅಕ್ಷಯ್ ಕುಮಾರ್, ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಟ ಅನುಪಮ್ ಖೇರ್ ಅವರಿಗೂ ಸರ್ಕಾರದಿಂದ ಭದ್ರತೆ ಒದಗಿಸಲಾಗುತ್ತಿದೆ.

Related Articles

Back to top button