Latest

ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ನೊಟೀಸ್ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆ ವಿಚಾರಣೆಗೆ ಹಾಜರಾಗಿದ್ದಾರೆ.

ಡ್ರಗ್ಸ್ ಖರೀದಿ ವಿಚಾರವಾಗಿ ಕರಿಷ್ಮಾ ಎಂಬುವವರ ಜೊತೆ ದೀಪಿಕಾ ವಾಟ್ಸಪ್ ಸಂಭಾಷಣೆ ನಡೆಸಿದ್ದರು. ಅಲ್ಲದೇ ಈ ಗ್ರೂಪ್ ನ ವಾಟ್ಸಪ್ ಅಡ್ಮಿನ್ ಕೂಡ ದೀಪಿಕಾ ಅವರೇ ಆಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಟಿ ದೀಪಿಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎನ್ ಸಿಬಿ ನೊಟೀಸ್ ನೀಡಿತ್ತು.

ಎನ್ ಸಿಬಿ ನೊಟೀಸ್ ಹಿನ್ನೆಲೆಯಲ್ಲಿ ಇದೀಗ ದೀಪಿಕಾ ಪಡುಕೋಣೆ ಎನ್ ಸಿಬಿ ವಿಚಾರಣೆಗೆ ಹಾಜರಾಗಿದ್ದು, ಮುಂಬೈನ ಎನ್ ಸಿಬಿ ಗೆಸ್ಟ್ ಹೌಸ್ ನಲ್ಲಿ ದೀಪಿಕಾ ವಿಚಾರಣೆ ಆರಂಭವಾಗಿದೆ.

ಇನ್ನು ಡ್ರಗ್ಸ್ ಪ್ರಕರಣ ಸಂಬಂಧ ಇಂದು ಬಾಲಿವುಡ್ ನ ಮತ್ತಿಬ್ಬರು ಖ್ಯಾತ ನಟಿಯರಾದ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿಖಾನ್ ಕೂಡ ಎನ್ ಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button