Kannada NewsKarnataka NewsLatest

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡೋಲಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಆಟ ಆಡಿಸುತ್ತೇನೆಂದು ತಂದೆ ತಾಯಿಗೆ ನಂಬಿಸಿ ಕರೆದೊಯ್ದ ಆರೋಪಿ ಸುನೀಲ ಬಾಳು ಬಾಳನಾಯ್ಕ (೨೬ ವರ್ಷ) ಎಂಬುವನು ಆ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದನು.

ಇದನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ಕೆ. ಶಿವಾರೆಡ್ಡಿ ಮಾರ್ಗದರ್ಶನದಲ್ಲಿ ಕಾಕತಿ ಠಾಣೆಯ ಪಿಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ ಇಂದು ಮುಂಜಾನೆ 11 ಗಂಟೆಗೆ ಅಲತಗಾ ಕ್ರಾಸ್ ಹತ್ತಿರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

9 ಗಂಟೆಗಳಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.

 ಘಟನೆ ವಿವಿರ 

 ಕಡೋಲಿ ಗ್ರಾಮದಲ್ಲಿ ಬುಧವಾರ ಸಂಜೆ  5 ಗಂಟೆ ಸುಮಾರಿಗೆ ಆಟ ಆಡುತ್ತಿದ್ದ ಕಂದಮ್ಮನನ್ನು ಕಾಮುಕ ಸುನೀಲ ಅವರ ಹೆತ್ತವರಿಗೆ ಇವಳನ್ನು ಆಟಕ್ಕೆ ಕರೆದುಕೊಂಡು ಹೋಗುತ್ತೆನೆಂದು ಹೇಳಿ ಸಮೀಪದ ಹೊಲದಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ನಡೆಸಿದ್ದ.
ಆಗ ಈತನನ್ನು ಕಂಡ ಮಗುವಿನ ತಂದೆಗೆ ಸಂಶಯ ಬಂದು ಮನೆಯ ಬಾಗಿಲು ತೆಗೆದಾಗ ಸುನೀಲ ನಿಚ ಕೃತ್ಯ ನಡೆಸಿದ್ದನ್ನು ಕಂಡು ದಿಗ್ಭಾಂತನಾಗಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಾಕತಿ ಪೊಲೀಸರು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಮಗ ಸುನೀಲ ಅತ್ಯಾಚಾರಕ್ಕೆ ಪ್ರಯತ್ನಿದ ಮಾಹಿತಿ ತಿಳಿಯುತ್ತಿದ್ದಂತೆ ಮಗನ ತಂದೆ ನೀಚ ಕೃತ್ಯವನ್ನು ಮುಚ್ಚಲು ಹುನ್ನಾರ ನಡೆಸಿದ. ಆದರೆ ಅಷ್ಟೊತ್ತಿಗೆ ಘಟನೆಯ ಬಗ್ಗೆ ಸೂಕ್ಷ್ಮ ಮಾಹಿತಿ ಕಾಕತಿ ಪಿ ಐ ಶ್ರೀಶೈಲ ಕೌಜಲಗಿ ಗಮನಕ್ಕೆ ತಲುಪುತ್ತಿದ್ದಂತೆ ಸಿಬ್ಬಂದಿ ನೂಲಿ, ಅಡಿವೆಪ್ಪಾ ಕುಂಡೇದ ಮತ್ತು ಮಾರುತಿ ಪೂಜೇರಿ ಬಂದು ಆರೋಪಿ ಸುನೀಲ ಪರಾರಿಯಾಗುವ ಮುನ್ನವೇ ಅವನಿಗೆ ಬಲೆಗೆ ಹಾಕಿ ಹಿಡಿದಿದ್ದಾರೆ.
ಕಾಕತಿ ಪೋಲಿಸ್ ಠಾಣೆಯಲ್ಲಿ ಆರೋಪಿ ವಿರುದ್ದ  ಪೋಕ್ಸೊ (2012) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

 

Home add -Advt

Related Articles

Back to top button