Politics

*ಭಾರತದ ಜೊತೆ ಬಾಂಧವ್ಯ ಹೊಂದುವುದು ಅತಿ ಮುಖ್ಯ: ಪಾಕ್ ಮಾಜಿ ಪ್ರಧಾನಿ*

ಪ್ರಗತಿವಾಹಿನಿ ಸುದ್ದಿ : ಭಾರತ ಯಾವತ್ತಿಗೂ ನಮ್ಮ ಪ್ರಮುಖ ನೆರೆಯ ರಾಷ್ಟ್ರ. ಅದರ ಜತೆ ಉತ್ತಮ ಬಾಂಧವ್ಯ ಹೊಂದುವುದು ಅತಿಮುಖ್ಯ ಎಂದು ಪಾಕ್ ಮಾಜಿ ಪ್ರಧಾನಿ ಅನ್ವ‌ರ್ ಉಲ್ ಹಕ್ ಕಕರ್ ಹೇಳಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲಿ ಎಸ್ ಸಿ ಓ ಶೃಂಗಸಭೆ ನಡೆಯುತ್ತಿದ್ದು, ಕೇಂದ್ರ ಮಂತ್ರಿ ಜೈ ಶಂಕರ್ ಭೇಟಿ ನೀಡಿರೋ ಬೆನ್ನಲ್ಲೇ ಈ ಹೇಳಿಕೆ ಸಾಕಷ್ಟು ಕುತೂಹಕ ಸೃಷ್ಟಿ ಮಾಡಿದೆ. ಉಭಯ ರಾಷ್ಟ್ರಗಳ ಮಧ್ಯೆ ಸಾಮ್ಯತೆ ಇರಬೇಕು . ವ್ಯಾಪಾರ-ವಹಿವಾಟು ಸೇರಿದಂತೆ ಅನೇಕ ವಲಯಗಳ ಸುಧಾರಣೆ ಕ್ರಮಗಳ ಬಗ್ಗೆ ಪಾರದರ್ಶಕ ಚರ್ಚೆಗೆ ಪ್ರತ್ಯೇಕ ವೇದಿಕೆ ಚರ್ಚೆ ಆಗಬೇಕು ಎಂದು ಹೇಳಿದರು.

ಸದಾ ಭಾರತದ ವಿರುದ್ಧ ವೈರುಧ್ಯದ ಹೇಳಿಕೆ ಕೊಡುವ ಪಾಕಿಸ್ತಾನದ ನಾಯಕರ ಮದ್ಯೆ ಮಾಜಿ ಪಿಎಂ ಅನ್ವರ್ ಉಲ್ ಹಕ್ ಈ ರೀತಿಯ ಹೇಳಿಕೆ ನೀಡಿರೋದು ಸಾಕಷ್ಟು ಕೌತುಕ ಸೃಷ್ಟಿಮಾಡಿದೆ. ಅ.15 ಮತ್ತು ಅ.16 ಪಾಕಿಸ್ತಾನದಲ್ಲಿ ಎಸ್ ಸಿ ಓ ಶೃಂಗಸಭೆ ನಡೆಯುತ್ತಿದ್ದು ಇದಕ್ಕಾಗಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. 2 ದಿನ ಲಾಕ್ ಡೌನ್ ಕೂಡ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button