Karnataka NewsLatest

ಗಡಿ ಕಿಚ್ಚು: ತಟಸ್ಥ ಸಮಿತಿ ರಚಿಸಲು ಉಭಯ ರಾಜ್ಯಗಳಿಗೆ ಅಮಿತ್ ಶಾ ಸೂಚನೆ

Home add -Advt

 

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ತಟಸ್ಥ ಸಮಿತಿ ರಚಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದವರೆಗೆ ಯಥಾಸ್ಥಿತಿ ಕಾಪಾಡಿ, ಗಡಿಯಲ್ಲಿ ಶಾಂತಿ ಕಾಪಾಡಲು ತಟಸ್ಥ ಸಮಿತಿ ರಚಿಸಲು ಸೂಚಿಸಿದ ಅಮಿತ್ ಶಾ, ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸಲಹೆಯಿತ್ತರು.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಮತ್ತೆ ಸಮಾಲೋಚಿಸಲು ಅವರು ಸಲಹೆ ನೀಡಿದರು.

ಯಾರೂ ಯಾವುದನ್ನೂ “ಇದು ನಮ್ಮದು,” ಎಂದು ಹೇಳಿಕೊಳ್ಳಬಾರದು.  ಟ್ಚಿಟ್ಟರ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಬೇಕು. ಜತೆಗೆ ವ್ಯಾಪಾರ ವಹಿವಾಟುಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗದಂತೆ ಎಚ್ಚರಿಕೆ ವಹಿಸಬೇಕು. ಶಾಂತಿ ಕದಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾ ಸೂಚಿಸಿದರು.

ಗಡಿ ವಿವಾದವನ್ನು ರಾಜಕೀಯವಾಗಿ ಬಳಕೆ ಮಾಡದಂತೆ ಅಮಿತ್ ಶಾ ಉಭಯ ರಾಜ್ಯಗಳ ಸಿಎಂಗಳಿಗೆ ಸೂಚಿಸಿದ್ದಾರೆ.

ಡಿಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಇತರ ಕೆಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಭೆಗೂ  ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಜರಿದ್ದರು.

ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?

https://pragati.taskdun.com/implimentation-of-mahajan-commission-report-is-profitable-for-maharashtra-only/

*ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಕಾರು; ಮೂವರ ದುರ್ಮರಣ*

https://pragati.taskdun.com/car-accident3-deathshiratumakuru/

Related Articles

Back to top button