Latest

ಶಿರಸಿ‌ ಮೂಲದ ಶ್ರೀನಿಧಿಗೆ ಅಮೆರಿಕದ ಪ್ರತಿಷ್ಠಿತ ವಿವಿಯಿಂದ ಎಂ.ಎಸ್. ಪದವಿ 

ಪ್ರಗತಿವಾಹಿನಿ ಸುದ್ದಿ, ಶಿರಸಿ:  ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಶ್ರೀನಿಧಿ ಹೆಗಡೆ  ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎಂ.ಎಸ್. ಪದವಿ ಪಡೆದು ಸಾಧನೆ ಮಾಡಿದ್ದಾರೆ.

ಶಿರಸಿಯ ಅಮ್ಮಚ್ಚಿಯ ಶ್ರೀನಿಧಿ ಮದುವೆಯ ನಂತರವೂ ವಿದ್ಯಾಭ್ಯಾಸ ಮುಂದುವರೆಸಿ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಟರ್ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ.

ಇದಕ್ಕೂ ಮೊದಲು ಭಾರತದಲ್ಲಿ ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಶ್ರೀನಿಧಿ ಕೆಲಸ ಮಾಡಿದ್ದಾರೆ. ಅಮ್ಮಚ್ಚಿಯ ಸುರೇಶ ಹೆಗಡೆ ಮತ್ತು ಗೀತಾ ದಂಪತಿ ಪುತ್ರಿಯಾಗಿರುವ ಶ್ರೀನಿಧಿ ಅವರ ಪತಿ ಅನಿರುದ್ಧ ಸಹ ಅಮೆರಿಕದಲ್ಲಿ ಎಂ.ಎಸ್. ಪದವಿ ಪಡೆದು ಕೆಲಸದಲ್ಲಿದ್ದಾರೆ.

https://pragati.taskdun.com/womens-vedic-gurukula-to-start-soon-from-srishaila-peetha/

Home add -Advt

https://pragati.taskdun.com/justice-b-veerappa-life-career-worthy-cm-siddaramaiah/

https://pragati.taskdun.com/a-man-who-does-good-is-not-defeated-mg-hiremath/

https://pragati.taskdun.com/the-case-of-gnanavapi-victory-for-hindus/

Related Articles

Back to top button