ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ– ಪಟ್ಟಣದ ಎಂ ಜಿ ಕಾಲೋನಿಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ಒಳಪಡುವ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಪರಶುರಾಮ ಯಲ್ಲಪ್ಪ ಕೊನೇರಿ (18) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದನು. ಮಂಗಳವಾರ 11ಗಂಟೆ ಸುಮಾರಿಗೆ ತನ್ನ ಕೊಠಡಿಯಲ್ಲಿ ಎರಡು ಮಲಗುವ ಕಾಟ್ಗಳ ಮಧ್ಯೆ ಮೇಲ್ಭಾಗಕ್ಕೆ ಕಟ್ಟಿಗೆ ಅಡ್ಡ ಕಟ್ಟಿ ಟಾವೆಲ್ ನಿಂದ ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಸಿಪಿಐ ಉಳವಪ್ಪ ಸಾತೇನಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ ಬಿ ಯಮನೂರ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಆತನ ರೂಮಿನಲ್ಲಿ 8 ಹುಡುಗರು ಇದ್ದರು. ಎಲ್ಲರೂ ಕಾಲೇಜಿಗೆ ಹೋದಾಗ ನೇಣಿಗೆ ಶರಣಾಗಿದ್ದಾನೆ. ಬಾಲಕನ ತಂದೆ ತಲಾಟಿ ಕೈಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಬಾಲಕ ಪ್ರಥಮ ಪಿಯು ಪೇಲ್ ಆಗಿದ್ದ, ಸಪ್ಲಿಮೆಂಟರಿಯಲ್ಲಿ ಪಾಸ್ ಮಾಡಿಕೊಂಡಿದ್ದ, ನನಗೆ ಕಾಮರ್ಸ ಇಷ್ಟ ಇಲ್ಲ, ಆರ್ಟ್ಸ್ ಬೇಕಾಗಿತ್ತು. ಮನೆಯವರು ಕಾಮರ್ಸ್ ಮಾಡು ಎನ್ನುತ್ತಿದ್ದಾರೆ ಎಂದು ಗೆಳೆಯರಿಗೆ ಹೇಳಿಕೊಳ್ಳುತ್ತಿದ್ದನಂತೆ.
ಹೈಪರ್ ಟ್ರಿಕೋಸಿಸ್; ಈ ಭಯಾನಕ ರೋಗದ ಬಗ್ಗೆ ಗೊತ್ತೆ ?
https://pragati.taskdun.com/hypertrichosis-do-you-know-about-this-terrible-disease-that-causes-hair-to-grow-like-a-wolf/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ