
ಪ್ರಗತಿವಾಹಿನಿ ಸುದ್ದಿ: ಆಟದ ಮೈದಾನದ ಗೇಟ್ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಮೈದಾನದಲ್ಲಿ ನಡೆದಿದೆ.
10 ವರ್ಷದ ನಿರಂಜನ್ ಮೃತ ಬಾಲಕ. ಭಾನುವಾರವಾದ್ದರಿಂದ ಆಟವಾಡಲೆಂದು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಮೈದಾನದ ಗೇಟ್ ತೆಗೆಯಲೆಂದು ಗೇಟ್ ತಳ್ಳುತ್ತಿದ್ದಂತೆಯೇ ಬಾಲಕನ ಮೈಮೇಲೆಯೇ ಗೇಟ್ ಬಿದ್ದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹಲವು ವರ್ಷಗಳಿಂದಲೂ ಗೇಟ್ ದುರಾವಸ್ಥೆಯಲ್ಲಿದ್ದರೂ ಬಿಬಿಎಂಪಿ ಗೇಟ್ ದುರಸ್ತಿ ಮಾಡಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.