ಪ್ರಗತಿವಾಹಿನಿ ಸುದ್ದಿ; ರಾಯಚೂರು: ನೀರು ತರಲು ನದಿಗೆ ಇಳಿದಿದ್ದ ಬಾಲಕನನ್ನು ನೋಡ ನೋಡುತ್ತಿದ್ದಂತೆ ಮೊಸಳೆ ಹೊತ್ತೊಯ್ದ ಘೋರ ಘಟನೆ ರಾಯಚೂರಿನ ಕುರವಕಲಾ ಗ್ರಾಮದಲ್ಲಿ ನಡೆದಿದೆ.
ನವೀನ್ (9) ಮೃತ ಬಾಲಕ. ಪೋಷಕರೊಂದಿಗೆ ಜಮೀನಿಗೆ ಬಂದಿದ್ದ ಬಾಲಕನನ್ನು ತಂದೆ-ತಾಯಿ ನದಿಯಿಂದ ಕುಡಿಯಲು ನೀರು ತರುವಂತೆ ಕಳುಹಿಸಿದ್ದರು.
ಇನ್ನೂರ್ವ ಬಾಲಕನೊಂದಿಗೆ ನವೀನ್ ನದಿ ಬಳಿ ತೆರಳಿ, ನೀರಿಗಾಗಿ ನದಿಗೆ ಇಳಿದಿದ್ದ. ಬಾಲಕ ಬಾಟಲಿಯಲ್ಲಿ ನೀರು ತುಂಬುತ್ತಿದ್ದಾಗ ಏಕಾಏಕಿ ಮೊಸಲೆ ದಾಳಿ ನಡೆಸಿ, ಬಾಲಕನನ್ನು ಹೊತ್ತೊಯ್ದಿದೆ. ಮತ್ತೋರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಾಲಕ ನವೀನ್ ಗಾಗಿ ಕೃಷ್ಣಾನದಿಯಲ್ಲಿ ಶೋಧ ನಡೆಸಲಾಗಿದೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ