Latest

ಬ್ರಹ್ಮಾಕುಮಾರಿ ಸಂಸ್ಥೆಯ ಸಹ ಆಡಳಿತಾಧಿಕಾರಿಣಿ ಈಶು ದಾದೀಜಿ ಅವ್ಯಕ್ತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹ ಆಡಳಿತಾಧಿಕಾರಿಣಿ ರಾಜಯೋಗಿನಿ ಈಶು ದಾದೀಜಿಯವರು ವಯೋಸಹಜ ಕಾಯಿಲೆಯಿಂದ ನಿನ್ನೆ ರಾತ್ರಿ 8 ಗಂಟೆಗೆ ಪಾರ್ಥಿವ ಶರೀರವನ್ನು ತ್ಯಜಿಸಿ ಅವ್ಯಕ್ತರಾದರು.

ಅಹಮದಾಬಾದನಲ್ಲಿರುವ ಸ್ಟರ್ಲಿಂಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸರ್ವರ ಸ್ನೇಹಿ, ಆಜ್ಞಾಕಾರಿ ಮತ್ತು ನಿಷ್ಠಾವಂತರಾಗಿದ್ದ ಅವರು ಸಂಸ್ಥೆಯ ಆರಂಭದಿಂದ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

ದಾದೀಜಿಯವರ ಅಂತಿಮ ಸಂಸ್ಕಾರ ಕೋವಿಡ್-19 ಸರಕಾರದ ನಿಯಮಗಳ ಪ್ರಕಾರ ಈಶ್ವರೀಯ ಗೌರವದೊಂದಿಗೆ ಆಬುರೋಡ್ ನದಿಯ ದಡದಲ್ಲಿ ಇರುವ ಮುಕ್ತಿಧಾಮದಲ್ಲಿ ಬೆಳ್ಳಿಗ್ಗೆ 10 ಗಂಟೆಗೆ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button