Belagavi NewsBelgaum NewsKannada NewsKarnataka News

*ಬೆಳಗಾವಿಯಿಂದ ಉತ್ತರ ಭಾರತ ಯಾತ್ರೆಗೆ ಹೊರಟ ಭಕ್ತರು; ಶ್ರೀ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ*

ಪ್ರಗತಿವಾಹಿನಿ‌ ಸುದ್ದಿ: ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಶ್ರೀ ಓಂಕಾರ ಆಶ್ರಮ ಮಠದ ಶ್ರೀ ಶಿವಶಂಕರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗ್ರಾಮದ ಭಕ್ತರಿಗೆ ಉತ್ತರ ಭಾರತ ಪ್ರವಾಸ ಹಮ್ಮಿಕೊಂಡು ಚಾಲನೆ ನೀಡಲಾಯಿತು. 

ಬಳಿಕ ಶಿವಶಂಕರ ಸ್ವಾಮೀಜಿಗಳು ಮಾತನಾಡಿ, ಭಾರತ ದೇಶ ವಿವಿಧ ಸಂಸ್ಕೃತಿಗಳಿಂದ ಕೂಡಿದ ನಮ್ಮ ದೇಶವಾಗಿದೆ. ಹಿಂದುಗಳಿಗೆ ಕಾಶಿ ಇದು ಬಹು ಮುಖ್ಯಸ್ಥಾನವಾಗಿದ್ದು ಪವಿತ್ರ ಗಂಗಾ ನದಿ ಸ್ನಾನ ಮಾಡಿದರೆ ಪುಣ್ಯಲಭ್ಯವಾಗುತ್ತದೆ. ಆದ್ದರಿಂದ ಭಕ್ತರಿಗೆ ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಸುಮಾರು 16 ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕಾಟೆ, ಸದಸ್ಯರಾದ ಅನಿಲ ಹಂಜೆ, ಮಾತೋಶ್ರೀ ಬ್ರಹ್ಮರಂಬಿಕಾ ದೇವಿ, ನಾಗಲಾಂಬಿಕಾ ದೇವಿ, ಸತ್ಯಪ್ಪ ಭೀಷ್ಠೆ, ಸಂತೋಷ ಮಂಗಸೂಳೆ ಉಲ್ಲಾಸ ಮಿರ್ಜೆ ಹೀಗೆ ಅನೇಕ ಭಕ್ತರು ಉಪಸ್ಥಿತಿದ್ದರು.

Home add -Advt

Related Articles

Back to top button