Kannada NewsKarnataka NewsNationalWorld

*BRICS SUMMIT: ಬ್ರಿಕ್ಸ್ ಶೃಂಗಸಭೆ ಆರಂಭ: ಈ ವರ್ಷದ ಬ್ರಿಕ್ಸ್ ಶೃಂಗಸಭೆ ಐತಿಹಾಸಿಕ ಮೈಲುಗಲ್ಲು: ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ನವದೆಹಲಿಯ ಭಾರತ್ ಮಂಟಪದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ರಾಮಫೋಸಾ ಸೇರಿದಂತೆ ಹಲವು ಗಣ್ಯರು ಭಾಗವಿಸಿದ್ದಾರೆ.

Home add -Advt

ಬ್ರಿಕ್ಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷದ ಬ್ರಿಕ್ಸ್ ಶೃಂಗಸಭೆ ಐತಿಹಾಸಿಕ ಮೈಲುಗಲ್ಲು. ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಬ್ರಿಕ್ಸ್ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಸ್ಥಿತಿಸ್ಥಾಪಕತ್ವವಾಗಿದೆ. ನಾವೀನ್ಯತೆ, ಸಹಕಾರ, ಸುಸ್ಥಿರತೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಭಾರತದ ಅಧ್ಯಕ್ಷತೆಯಲ್ಲಿ 350ಕ್ಕೂ ಹೆಚ್ಚು ಸಭೆಗಳನ್ನು ಆಯೋಜನೆ ಮಾಡಲಾಗುವುದು. ದೇಶದ 30 ನಗರಗಳಲ್ಲಿ ವಿವಿಧ ಬ್ರಿಕ್ಸ್ ಕಾರ್ಯಕ್ರಮ ಆಯೋಜಿಸಲಾಗುವುದು. ಭಾರತದ ಬ್ರಿಕ್ಸ್ ಶೃಂಸಭೆಯ ಅಧ್ಯಕ್ಷತೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡಿದ್ದಕ್ಕೆ ಧ್ಯನ್ಯವಾದಗಳು ಎಂದರು.

ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲಿ ಈ ಬ್ರಿಕ್ಸ್ ಶೃಂಗಸಭೆಗೆ ವಿಶೇಷ ಮಹತ್ವವಿದೆ. 20ನ್ರ‍ೇ ವಯಸ್ಸು ಮಾನವನ ಜೀವನದಲ್ಲಿ ಪರಿಪಕ್ವತೆ, ಜವಾಬ್ದಾರಿಯ ಹೊಸ ಹಂತ. ಬ್ರಿಕ್ಸ್ ಕೂಡ ಈಗ ಪ್ರೌಢಾವಸ್ಥೆಗೆ ಬರುವಿಕೆ ಹಂತಕ್ಕೆ ಪ್ರವೇಶಿಸಿದೆ. ಈಗ ಬ್ರಿಕ್ಸ್ ಜಾಗತಿಕ ವೇದಿಕೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಮುಂದಿನ ಹಂತದಲ್ಲಿ ಪರಸ್ಪರ ಗೌರವ್, ಸಹಕಾರ ಮತ್ತು ಜವಾಬ್ದಾರಿಯೊಂದಿಗೆ ಬ್ರಿಕ್ಸ್ ದೇಶಗಳ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ಸಾರಿದರು.


Related Articles

Back to top button