
ಪ್ರಗತಿವಾಹಿನಿ ಸುದ್ದಿ, ಶಿಮ್ಲಾ: ಹೈಟೆನ್ಷನ್ ವಿದ್ಯುತ್ ಲೈನ್ ಕೈಯ್ಯಲ್ಲಿ ಹಿಡಿದು ಸಾಹಸ ಮೆರೆದು ಕಳೆದೊಂದು ವಾರದಿಂದ ಜಾಲತಾಣಗಳಲ್ಲಿ ಹೆಸರಾಗಿದ್ದ ವ್ಯಕ್ತಿಗೆ ಶಾಕ್ ಗೆ ಎಸೆದ ಸವಾಲೇ ಜೀವಕ್ಕೆ ಮುಳುವಾಗಿದೆ.
ಹಿಮಾಚಲ ಪ್ರದೇಶದ ಪ್ರವಾಸಿ ತಾಣವೊಂದರಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದಾಗ 71 ವರ್ಷದ ಇವಾನ್ ಬ್ರೌನ್ ಅಕಸ್ಮಾತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಬಹುತೇಕ ಎಲ್ಲ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಉಣ್ಣೆಯ ಗ್ಲೌಸ್ ಧರಿಸಿ ಎತ್ತರದ ಲ್ಲಿರುವ ಹೈಟೆನ್ಷನ್ ಲೈನ್ ಹಿಡಿದು ಎಳೆಯುವ ರೋಚಕ ದೃಷ್ಯ ಎಲ್ಲರ ಗಮನ ಸೆಳೆದಿತ್ತು. ಕೆಲವರು ಇದನ್ನು ಕಂಡು ‘ಅಬ್ಬಬ್ಬ’ಎಂದು ಉದ್ಗರಿಸಿದ್ದರೆ ಅನೇಕ ಜನ ‘ಇದು ಡೇಂಜರ್’ ಎಂದು ಎಚ್ಚರಿಕೆ ಸಂದೇಶ ಕೂಡ ನೀಡಿದ್ದರು.
ಆದರೆ ಈ ಅಪರೂಪದ ಸಾಹಸವನ್ನು ಖಯಾಲಿಯಾಗಿಸಿಕೊಂಡಿದ್ದ ಇವಾನ್ ಬ್ರೌನ್ ನಿರ್ಮಾಣ ಸ್ಥಳವೊಂದರ ಬಳಿ ಈ ಸಾಹಸದಲ್ಲಿ ತೊಡಗಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಲೈನ್ ಸ್ಪರ್ಷಗೊಂಡು ದುರ್ಮರಣಕ್ಕೀಡಾಗಿದ್ದಾರೆ.
ಇವಾನ್ ಬ್ರೌನ್ ಅವರು ಎರಡು ತಿಂಗಳ ಅವಧಿಗಾಗಿ ಭಾರತದ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ಅನೇಕ ಸ್ನೇಹಿತರನ್ನು ಕೂಡ ಭೇಟಿಯಾಗಿದ್ದರು. ಆದರೆ ಅವರ ದಾರುಣ ಸಾವಿಗೆ ಸ್ನೇಹಿತರು, ಜಾಲತಾಣಿಗರು ಮಮ್ಮಲ ಮರುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ