ಪ್ರಗತಿವಾಹಿನಿ ಸುದ್ದಿ: ದಿಲ್ಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲೊಂದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಕೆಟ್ಟು ನಿಂತ ಘಟನೆ ನಡೆದಿದ್ದು, ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ರೈಲನ್ನು ಸಮೀಪದ ಭರ್‌ಥಾನಾ ರೈಲ್ವೇ ನಿಲ್ದಾಣಕ್ಕೆ ಸರಕು ರೈಲ್ವೇ ಎಂಜಿನ್ ಬಳಸಿ ಎಳೆದು ತರಲಾಯಿತು. ಘಟನೆಯಿಂದ ಅಸಮಾಧಾನಿತರಾಗಿದ್ದ ಪ್ರಯಾಣಿಕರಿಗೆ ಬದಲೀ ರೈಲುಗಳ ಮುಖಾಂತರ ಕಾನ್ಪುರಕ್ಕೆ ಕಳುಹಿಸಿ ಅನಂತರ ಶ್ರಮ್ ಶಕ್ತಿ ಎಕ್ಸ್‌ಪ್ರೆಸ್ ರೈಲು ಮುಖಾಂತರ ವಾರಾಣಾಸಿಗೆ ತಲುಪಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಮಂದಿ ಸಾಮಾಜಿಕ ತಾಣದಲ್ಲಿ ವ್ಯಂಗ್ಯ ಮಾಡಿದ್ದು, ಇದು ಬಿಜೆಪಿಯ ಡಬಲ್ ಇಂಜಿನ್ ಮಾಡೆಲ್ ಎಂದು ಟೀಕೆ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ