Latest

ಕುಡಿದ ನೀರೇ ಬ್ರೂಸ್ ಲೀ ಜೀವಕ್ಕೆ ಮುಳುವಾಯಿತೇ?

ಪ್ರಗತಿವಾಹಿನಿ ಸುದ್ದಿ, ಹಾಂಕಾಂಗ್: ಮಾರ್ಷಲ್ ಆರ್ಟ್ ದಂತಕತೆ ಬ್ರೂಸ್ ಲೀ ಸಾವಿಗೆ ಈವರೆಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತ ಬರಲಾಗಿದೆ. ಚೀನಾದ ಗ್ಯಾಂಗ್ ಸ್ಟರ್ ಗಳಿಂದ ಕೊಲೆಯಾದರು ಎನ್ನುವವರೆಗೂ ನಾನಾ ಕಾರಣಗಳನ್ನು ಹೇಳಲಾಗಿದ್ದು ಈವರೆಗೆ ನಿಖರ ಕಾರಣ ಗೊತ್ತಾಗಿಲ್ಲ.

1973ರಲ್ಲಿ 32ನೇ ವರ್ಷದಲ್ಲಿ ಮೃತಪಟ್ಟ ಬ್ರೂಸ್ ಲೀ ಈಗ ಇಹಲೋಕ ತ್ಯಜಿಸಿ ಅರ್ಧ ಶತಮಾನಗಳೇ ಕಳೆದ ವೇಳೆ ಅವರ ಸಾವು ಅತಿಯಾದ ನೀರಿನ ಸೇವನೆಯಿಂದ ಸಂಭವಿಸಿರಬಹುದು ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಹೈಪೋನಾಟ್ರೇಮಿಯಾ ಅವರನ್ನು ಬಲಿ ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರಪಿಂಡದ ಅಸಮರ್ಥತೆಯು ಬ್ರೂಸ್ ಲೀಯನ್ನು ಕೊಂದಿದೆ ಎಂದು ಸಂಶೋಧಕರ ತಂಡ ಕ್ಲಿನಿಕಲ್ ಕಿಡ್ನಿ ಜರ್ನಲ್‌ನಲ್ಲಿ ಬರೆದಿದೆ.

ಬ್ರೂಸ್ ಲೀ ಅವರು ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸುತ್ತಿದ್ದರು ಎಂಬುದನ್ನು ಹಲವಾರು ಅಂಶಗಳು ಸೂಚಿಸುತ್ತವೆ. ಅವರ ಪತ್ನಿ ಲಿಂಡಾ ಕೂಡ ಇದನ್ನು ಉಲ್ಲೇಖಿಸಿದ್ದಾರೆ.  ಅವರ ಜೀವನಚರಿತ್ರೆಕಾರ ಮ್ಯಾಥ್ಯೂ ಪಾಲಿ ಅವರು ಕೂಡ ಬ್ರೂಸ್ ಲೀ ಮರಣ ಹೊಂದಿದ ದಿನ ಅಧಿಕ ನೀರಿನ ಸೇವನೆ ಬಗ್ಗೆ ಪದೇಪದೆ ಉಲ್ಲೇಖಿಸಿದ್ದಾರೆ ಎನ್ನುತ್ತಿದ್ದಾರೆ ತಜ್ಞರು.

ಮಹಾವೀರ ಸೌಹಾರ್ದ ಸಹಕಾರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ: ಹುಕ್ಕೇರಿ ಹಿರೇಮಠದಿಂದ ಗೌರವ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button