Advertisement -Home Add
Crease wise New Design
Jarkiholi Parents Add

ನೀವು ಬೇಡ, ನಿಮ್ಮ ಟೊಮ್ಯಾಟೋ ಬೇಡ ಎಂದ ಪಾಕಿಸ್ತಾನ

Pakistan's decision to cut ties with India

ನೀವು ಬೇಡ, ನಿಮ್ಮ ಟೊಮ್ಯಾಟೋ ಬೇಡ ಎಂದ ಪಾಕಿಸ್ತಾನ

ಪ್ರಗತಿವಾಹಿನಿ ಸುದ್ದಿ : ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ಐತಿಹಾಸಿಕ ತೀರ್ಮಾನದಿಂದ ಪಾಕಿಸ್ತಾನ ಒಳಗೊಳಗೇ ಕುದಿಯುತ್ತಿದೆ. ಸಖತ್ತಾಗಿ ಉರ್ಕೊಂಡಿರುವ ಪಾಕಿಸ್ತಾನ ನಿಮ್ಮ ಟೊಮ್ಯಾಟೋ ನೂ, ಬೇಡ ನೀವು ಬೇಡ ಅಂದಿದೆ.

ಎಸ್… “ಕೈಲಾಗದವರು ಮೈ ಪರಚಿಕೊಂಡರು” ಎಂಬ ಗಾದೆಯಂತೆ, ಏನು ಮಾಡಬೇಕೆಂದು ತೋಚದೆ ಕೆಲಸಕ್ಕೆ ಬಾರದ ಅಸ್ತ್ರಗಳನ್ನು ಬೀಸಲು ಆಲೋಚಿಸುತ್ತಿದೆ ಪಾಪಿಸ್ತಾನ. ಅದಕ್ಕಾಗಿ ಉಭಯ ರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿತ ಕಡಿತಗೊಳಿಸಲು ಮುಂದಾಗಿದೆ.

ಐತಿಹಾಸಿಕ ತೀರ್ಪಿನಿಂದ ಕೊತಕೊತ ಕುದಿತಾ ಇರೋ ಪಾಕ್, ಒಂದಿಷ್ಟು ಸುಳಿವು ಬಿಟ್ಟುಕೊಡದೆ ಕೇಂದ್ರ ಸರ್ಕಾರ 370 ವಿಧಿಯನ್ನು ಚಾಕಚಕ್ಯತೆಯಿಂದ ರದ್ದುಪಡಿಸಿತ್ತು, ಕಾಶ್ಮೀರ ನಮ್ಮದು… ಕಾಶ್ಮೀರ ನಮ್ಮದು… ಎಂದು ವಿಶ್ವಕ್ಕೆ ಸಾರಿ ಹೇಳಿತ್ತು. ಭಾರತದ ದಿಟ್ಟ ನಿರ್ಧಾರಕ್ಕೆ ಪಾಕಿಸ್ತಾನ ಬೆಚ್ಚಿ ಹೋಗಿತ್ತು, ಬೇರೆ ದಾರಿ ಕಾಣದೆ ಭಾರತದೊಂದಿಗೆ ವ್ಯಾಪಾರವೂ ಬೇಡ… ರಾಯಭಾರಿಯೂ ಬೇಡ ಎನ್ನುತ್ತಿದೆ ಪಾಕ್.

ಪಾಕ್ ಸಂಸತ್ನಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ನಿರ್ಧಾರ ಯುದ್ಧಕ್ಕೆ ನಾಂದಿಯಾಗಬಹುದು ಎಂದಿದ್ದಾರೆ. ಇದೆ ಬೆಳವಣಿಗೆಯಲ್ಲಿ ಪಾಕಿಸ್ತಾನ ಪ್ರಧಾನಿ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.ನೀವು ಬೇಡ, ನಿಮ್ಮ ಟೊಮ್ಯಾಟೋ ಬೇಡ ಎಂದ ಪಾಕಿಸ್ತಾನ

ಪಾಕ್ ಪ್ರಧಾನಿ ತೆಗೆದು ಕೊಂಡ ಪ್ರಮುಖ ನಿರ್ಧಾರಗಳು ಈಗಿವೆ ನೋಡಿ.

  • ಭಾರತದ ಜೊತೆ ವ್ಯಾಪಾರ, ವ್ಯವಹಾರ ಸಂಬಂಧವನ್ನು ಕಡಿತಗೊಳಿಸಲು ತೀರ್ಮಾನಿಸಿದೆ.
  •  ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಸಹ ಕಡಿತಗೊಳಿಸಲು ನಿರ್ಧರಿಸಿದೆ.
  • ಜೊತೆಗೆ ಪಾಕ್ ರಾಯಭಾರಿಯನ್ನು ಭಾರತದಿಂದ ಕರೆಸಿಕೊಳ್ಳಲು ಹಾಗೂ ಭಾರತದ ರಾಯಭಾರಿಯನ್ನು ಭಾರತಕ್ಕೆ ಕಳಿಸಲು ನಿರ್ಧರಿಸಿದೆ.
  • ಕಾಶ್ಮೀರದ ಈ ವಿಷಯನ್ನು ವಿಶ್ವಸಂಸ್ಥೆಯ ಮುಂದಿಡಲು ಆಲೋಚಿಸಿದೆ.
  • ಇದೆಲ್ಲದಕ್ಕೂ ಮುಖ್ಯವಾಗಿ ಆಗಸ್ಟ್ 15 ರ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ.

ಪಾಕಿಸ್ತಾನ ಇಷ್ಟೆಲ್ಲಾ ಸರ್ಕಸ್ ಮಾಡ್ತಾ ಇದ್ರೂ, ಭಾರತ ಮಾತ್ರ ಡೋಂಟ್ ಕೇರ್ ಎಂದಿದೆ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಇದೆ, ಯಾಕೆ ಅಂತೀರಾ…. ಭಾರದ ಯಾವುದೇ ಸಾಮಗ್ರಿ ಹಾಗೂ ವಿಚಾರಗಳಿಗೆ ಪಾಕ್ ಮೇಲೆ ಅವಲಂಭಿತವಾಗಿಲ್ಲ. ವ್ಯಾಪಾರ ವಹಿವಾಟು ಕಡಿತಗೊಳಿಸಿದರೆ ಪಾಕಿಸ್ಥಾನಕ್ಕೆ ನಷ್ಟ, ಟೊಮ್ಯಾಟೋ ರದ್ದಿನಿಂದ ಪಾಕಿಸ್ಥಾನಕ್ಕೆ ಬಾರಿ ಹೊಡೆತ, ಆದರೆ ಇದಾವ ನಷ್ಟ ಭಾರತಕ್ಕಿಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿರ್ಧಾರಗಳಿಂದ ಪಾಕಿಸ್ತಾನದ ಜನಗಳಿಗೆ ಹೊರೆಯಾಗಲಿದೆ…..////

Web Title : Pakistan’s decision to cut ties with India
Read Latest Kannada News Updates and Get News Live Alerts