ಕೇಂದ್ರ ಬಜೆಟ್ 2020-21

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2020-21ನೇ ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮಂಡಿಸುತ್ತಿರುವ ಮೊದಲ ಮುಂಗಡಪತ್ರ ಇದಾಗಿದೆ.

ಲೋಕಸಭೆಯಲ್ಲಿ ಬಜೆಟ್ ಮಾಂಡನೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್, 2019ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ದೇಶದ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

ಇಂದಿನ ಹಣಕಾಸು ಸ್ಥಿತಿ ಉತ್ತಮವಾಗಲು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಕಾರಣ.ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಜೇಟ್ಲಿ ಅವಧಿಯಲ್ಲಿ ಜಿಎಸ್ ಟಿ ಜಾರಿಗೆ ಬಂದಿತು. ಜಿಎಸ್ ಟಿ ಒಂದು ಐತಿಹಾಸಿಕ ನಿರ್ಧಾರ ಎಂದರು. ಕೊಳಕು ರಾಜಕೀಯವನ್ನು ಮೀರಿ ಭಾರತ ಬೆಳೆಯುತ್ತಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಅವಶ್ಯವಾದ ಹಣಕಾಸನ್ನು ಕೇಂದ್ರ ಸರ್ಕಾರ ಹೊಂದಿಸಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರವನ್ನು ಸ್ವಚ್ಛಗೊಳಿಸಲಾಗಿದೆ. ಜಿಎಸ್ ಟಿ ದರದಲ್ಲಿ ಕಡಿತ ಮಾಡಿರುವುದರ ಪರಿಣಾಮ ದೇಶದ ಪ್ರತಿ ಮನೆಯ ಖರ್ಚು ಶೇ.4 ರಷ್ಟು ಕಡಿಮೆಯಾಗಿದೆ.

ಬಜೆಟ್ ಪ್ರಮುಖಾಂಶಗಳು:

ಈ ಬಜೆಟ್ ಆರ್ಥಿಕ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ದೇಶದ ಅರ್ಥವ್ಯವಸ್ಥೆ ತಳಪಾಯ ಭದ್ರವಾಗಿದೆ. 60 ಲಕ್ಷ ಹೊಸ ತೆರಿಗೆದಾರರ ಸೇರ್ಪಡೆಯಾಗಿದೆ. ಈ ಹಣಕಾಸು ವರ್ಷದಲ್ಲಿ 40 ಕೋಟಿ ಜಿಎಸ್ ಟಿ ರಿಟರ್ನ್ಸ್ ಫೈಲ್ ಆಗಿದೆ. ಮೋದಿ ಅವಧಿಯಲ್ಲಿ ಹಲವು ಮೈಲಿಗಲ್ಲು ಸ್ಥಾಪನೆಯಾಗಿದ್ದು ಭಾರತಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. 2006-16ರ 10 ವರ್ಷದ ಅವಧಿಯಲ್ಲಿ 27.1 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಲಾಗಿದೆ. ಕೇಂದ್ರ ಸರ್ಕಾರದ ಸಾಲ ಕಡಿಮೆಯಾಗಿದ್ದು, 2004ರ ಮಾರ್ಚ್ ನಲ್ಲಿ ಶೇ52.2 ರಷ್ಟು ಇದ್ದರೆ 2019ರ ಮಾರ್ಚ್ ವೇಳೆಗೆ ಇದು ಶೇ.48.7ಕ್ಕೆ ಇಳಿಕೆಯಾಗಿದೆ.

2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ.

ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮೂಲಕ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳನ್ನು ತಲುಪಿದೆ. ಆಧುನಿಕ ಕೃಷಿಗೆ ಒತ್ತು ನೀಡುವ ರಾಜ್ಯಗಳಿಗೆ ಬೆಂಬಲ ನೀಡಾಲಾಗುವುದು. ಎಲ್ಲಾ ರೀತಿಯ ಗೊಬ್ಬರಗಳ ಮಿತ ಬಳಕೆಗೆ ಒತ್ತು ನೀಡಿ, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಗೆ ಕಡಿವಾಣ ಹಾಕಲಾಗುವುದು.

ಪ್ರಧಾನಮಂತ್ರಿ ಕಿಸಾನ್​ ಭಿಮಾ ಯೋಜನೆಯಿಂದ 11 ಕೋಟಿ ರೈತರಿಗೆ ಅನುಕೂಲವಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. 20 ಲಕ್ಷ ರೈತರಿಗೆ ಸೋಲಾರ್​ ಪಂಪ್​ ವಿತರಣೆಯಾಗಿದೆ. ಕೃಷಿ ಶೈತ್ಯಾಗಾರ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

* ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು
* ಹೈನುಗಾರಿಕೆಗೂ ನರೇಗಾ ವಿಸ್ತರಣೆ.
* ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ.
* ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ಅನುದಾನ
* ದೇಶಾದ್ಯಂತೆ ಹೊಸದಾಗಿ 112 ಆಸ್ಪತ್ರೆಗಳ ನಿರ್ಮಾಣ
* 2025ರೊಳಗೆ ಎಲ್ಲಾ ಆಸ್ಪತ್ರೆಗಳಲ್ಲೂ ಜನೌಷಧಿ ಯೋಜನೆ
* ಮಿಷನ್​ ಇಂದ್ರಧನುಷ್​ ಯೋಜನೆಯ ವಿಸ್ತರಣೆ
* 12 ರೋಗಗಳಿಗೆ ಇಂದ್ರಧನುಷ್ ವಿಸ್ತರಣೆ
* ಆಯುಷ್ಮಾನ್ ಭಾರತ್ ವಿಸ್ತರಣೆ
* ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ
* ಕೈಗಾರಿಕೆ ಅಭವೃದ್ಧಿಗೆ 27,300 ಕೋಟಿ ರೂಪಾಯಿ ಮೀಸಲು
* ತಂತ್ರಜ್ಞಾನ ಟೆಕ್ಸ್​ಟೈಲ್ ಉತ್ತೇಜನಕ್ಕೆ10,480 ಕೋಟಿ
* ಹೊಸ ಯೋಜನೆ ‘ನಿರ್ವಿಕ್’ ಘೋಷಣೆ
* ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ಅನುದಾನ
* ಆನ್​ಲೈನ್ ಡಿಗ್ರಿ ಶಿಕ್ಷಣ ಆರಂಭಕ್ಕೆ ಒತ್ತು
* ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಘೋಷಣೆ
* ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ
* ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಆರಂಭ
* ಮೆಡಿಕಲ್ ಕಾಲೇಜು ಜೊತೆ ಜೋಡಣೆ
* ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜುಗಳ ಜೋಡಣೆ
* ಪ್ರವಾಸಿ ತಾಣಗಳಿಗೆ ತೇಜಸ್ ರೈಲು ಸಂಪರ್ಕ
* ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ-ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ.
* ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ವೇ ಶೀಘ್ರವೇ ಶೀಘ್ರವೇ ಘೋಷಣೆ.
* ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇ 2023ಕ್ಕೆ ಮುಕ್ತಾಯ.
* ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ,
* 2024ರ ವೇಳಗೆ 100 ಹೊಸ ವಿಮಾನ ನಿಲ್ದಾಣ ಸ್ಥಾಪನೆ, ರಾಷ್ಟ್ರೀಯ ಅನಿಲ ಗ್ರಿಡ್ ವಿಸ್ತರಣೆ
* ಡಿಜಿಟಲ್ ಇಂಡಿಯಾಗೆ ಒತ್ತು-ಭಾರತ್ ನೆಟ್ ಗೆ 6 ಸಾವಿರ ಕೋಟಿ ಮೀಸಲು
* ಅಂಗನವಾಡಿಗೂ ಡಿಜಿಟಲ್ ಸೌಲಭ್ಯ,
* 1 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಫೈಬಲ್ ನೆಟ್ ಸಂಪರ್ಕ.
* ಕ್ವಾಂಟಮ್ ಟೆಕ್ನಾಲಜಿಗಾಗಿ 8 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
* ಖಾಸಗಿ ವಲಯದವರಿಗೆ ಡಾಟಾ ಸೆಂಟರ್ ಪಾರ್ಕ್ ನಿರ್ಮಿಸಲು ಆಹ್ವಾನ
* ಎರಡು ರಾಷ್ಟ್ರೀಯ ವಿಜ್ಞಾನ ಯೋಜನೆಗಳಿಗೆ ಅನುದಾನ
* ಗರ್ಭಿಣಿಯರ ಸಾವು ತಡೆಯಲು ಹೊಸ ಟಾಸ್ಕ್ ಪೋರ್ಸ್
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28,600 ಕೋಟಿ ಅನುದಾನ
* 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ
* 10 ಕೋಟಿ ಮಹಿಳೆಯರ ಪೋಷ್ಠಿಕಾಂಶ ಅಂಕಿ-ಅಂಶ ದಾಖಲು
* ಎಸ್ಸಿ, ಹಿಂದುಳಿದ ವರ್ಗಗಳ ಸಮುದಾಯಗಳಿಗೆ 85,000 ಕೋಟಿ ಅನುದಾನ

* ಜನರ ವೈಯಕ್ತಿಕ ಆಅದಾಅಯ ತೆರಿಗೆ ಮಿತಿ ಹೆಚ್ಚಳ- 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ
* 5ರಿಂದ 7.5 ಲಕ್ಷದವರಗೆ ಶೇ.10 ತೆರಿಗೆ
* 7.5 ಲಕ್ಷದಿಂದ 10 ಲಕ್ಷದವರಗೆ ಶೇ.15 ತೆರಿಗೆ
* 10 ಲಕ್ಷದಿಂದ 12 ಲಕ್ಷದವರೆಗೆ ಶೇ. 20 ತೆರಿಗೆ
* 12.5 ಲಕ್ಷದಿಂದ 15 ಲಕ್ಷದವರೆಗೆ ಶೇ. 25 ತೆರಿಗೆ
* ಠೇವಣಿದಾರರ ಹಣ ಭದ್ರ. ಠೇವಣಿ ವಿಮಾ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
* ಐಡಿಬಿಐ ಬ್ಯಾಂಕಿನಲ್ಲಿರುವ ಸರ್ಕಾರಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ
* 5 ಪಾರಂಪರಿಕಾ ತಾಣಗಳ ಅಭಿವೃದ್ಧಿಗೆ ಒತ್ತು
* ಸಂಸ್ಕೃತಿ ಇಲಾಖೆಗೆ 3,150 ಕೋಟಿ ಮೀಸಲು.
* ಬೇಟಿ ಬಚಾವೋ ಬೇಟಿ ಬಡವೋದಿಂದ ಲಾಭವಾಗಿದ್ದು ಶಿಕ್ಷಣದಲ್ಲಿ ಸುಧಾರಣೆ- ಶಾಲೆಗೆ ಹೋಗುವ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಹೆಚ್ಚಾಳ
* ಪ್ರಾಥಮಿಕ ಶಾಲೆಯಲ್ಲಿ ಶೇ.93 ರಷ್ಟು ಹುಡುಗಿಯರಿದ್ದರೆ ಶೇ.89 ರಷ್ಟು ಹುಡುಗರಿದ್ದಾರೆ.
* ಸೆಕೆಂಡರಿ ಶಾಲೆಯಲ್ಲಿ ಶೇ.81ರಷ್ಟು ಬಾಲಕಿಯರಿದ್ದರೆ ಶೇ.72 ರಷ್ಟು ಬಾಲಕರು ಓದುತ್ತಿದ್ದಾರೆ.
* ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ ಶೇ.59.7ರಷ್ಟು ವಿದ್ಯಾರ್ಥಿನಿಯರಿದ್ದರೆ ಶೇ.57.54ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button