ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ರಿಂಗ್ ರಸ್ತೆಗೆ ಈ ಬಾರಿಯ ಬಜೆಟ್ ನಲ್ಲಿ 140 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ಬಹುವರ್ಷದ ಈ ಭಾಗದ ಕನಸು ನನಸಾಗಿದೆ.
ರಿಂಗ್ ರಸ್ತೆಗೆ ಹಣ ಕಾಯ್ದಿರಿಸುವುದರಲ್ಲಿ ಈ ಭಾಗದ ಶಾಸಕರ ಪ್ರಯತ್ನದ ಜೊತೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಅವರ ವಿಶೇಷ ಫಾಲೋ ಅಪ್ ಕೂಡ ಸೇರಿದೆ.
ಗಿರೀಶ್ ಹೊಸೂರು ಬೆಳಗಾವಿ ಜಿಲ್ಲೆಯವರು. ಈಚೆಗೆ ಅವರು ಬೆಳಗಾವಿಗೆ ಬಂದಿದ್ದಾಗ ಪ್ರೊಫೇಶನಲ್ ಫೋರಮ್ ಸದಸ್ಯರು ಅವರನ್ನು ಭೇಟಿ ಮಾಡಿ ರಿಂಗ್ ರಸ್ತೆ ಮಂಜೂರಿಗೆ ಪ್ರಯತ್ನಿಸುವಂತೆ ಮನವಿ ಮಾಡಿದ್ದರು. ಅಂದೇ ಅವರು ಈ ಕುರಿತು ಭರವಸೆ ನೀಡಿ, ಬೆಳಗಾವಿಗೆ ರಿಂಗ್ ರಸ್ತೆಯ ಅಗತ್ಯತೆ ಕುರಿತು ತಮಗೆ ಮನವರಿಕೆಯಾಗಿದೆ. ಹಾಗಾಗಿ ಖಂಡಿತ ಈ ಬಜೆಟ್ ನಲ್ಲಿ ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಬೆಳಗಾವಿಯ ಅತೀ ಅಗತ್ಯವಾದ ರಿಂಗ್ ರೋಡ್ ಯೋಜನೆ ಸಂಬಂಧ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆ ಆದಷ್ಟು ಶೀಘ್ರ ಜಾರಿಯಾಗಲು ಅಗತ್ಯ ಕ್ರಮವಾಗುವಂತೆ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಗರೀಶ್ ಹೊಸೂರ್ ತಿಳಿಸಿದ್ದರು.
ಅದರಂತೆ ಅವರು ಈ ಸಂಬಂಧದ ಎಲ್ಲ ಯೋಜನಾ ವರದಿಗಳನ್ನು ತರಿಸಿಕೊಂಡು, ಬಜೆಟ್ ನಲ್ಲಿ ಸೇರುವವರೆಗೂ ಪ್ರಯತ್ನ ನಡೆಸಿದ್ದಾರೆ.
ಬೆಳಗಾವಿ ರಿಂಗ್ ರಸ್ತೆ ಭೂ ಸ್ವಾಧೀನಕ್ಕೆ ಶೇ.50ರಷ್ಟು ಪಾಲನ್ನು ನೀಡಲು ಮನವಿ
ಬೆಳಗಾವಿ ರಿಂಗ್ ರಸ್ತೆ ನಿರ್ಮಾಣಕ್ಕೆ 140 ಕೋಟಿ ರೂ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ