ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೇಂದ್ರದ 2019ರ ಬಜೆಟ್ ಸರ್ವವ್ಯಾಪಿ, ಸರ್ವಸ್ಪರ್ಶಿ, ಜನಸ್ನೇಹಿ ಬಜೆಟ್ ಆಗಿದೆ. ಮಹಿಳೆಯರು, ಯುವಕರು, ರೈತರು ಸ್ವಾವಲಂಬಿ ಆರ್ಥಿಕ ಜೀವನ ನಡೆಸಲು ಸಹಕಾರಿ ಆಗಲಿದೆ ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾಜು ಚಿಕ್ಕನಗೌಡರ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 5 ವರ್ಷಗಳಲ್ಲಿ 100ಲಕ್ಷ ಕೋಟಿ ಹಾಗೂ ಅಭಿವೃದ್ಧಿ ಗತಿ ಏರಿಸಲು ಪಿಪಿಪಿ ಯೋಜನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ಉನ್ನತ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಕ್ಕೆ ವಿಶ್ವ ದರ್ಜೆ ಮಾದರಿ ಸಹಾಯ ಹಾಗೂ ಉತ್ತೇಜನ ನೀಡಲಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
–
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ