Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ‌ ನಡೆಯಲಿ: ರಮೇಶ ಕತ್ತಿ*

`ಜನತಾಪರಿವಾರದಿಂದ ಬೆಳೆದು ಬಂದ ಸಿದ್ಧರಾಮಯ್ಯನವರು ಬಡವರ, ಶೋಷಿತರ ಹಾಗೂ ನಾಡಿನ ಹಿಂದುಳಿದ ಜನರಧ್ವನಿಯಾಗಿ ರಾಜ್ಯದ ಅತಿಹೆಚ್ಚು ಅವಧಿ ಪೂರ್ಣಗೊಳಿಸುವ ಜೊತೆಗೆ, ಅತಿ ಹೆಚ್ಚು16 ಬಜೆಟ್ ಮಂಡಿಸಿ 17ನೇ ಬಜೆಟ್ ಮಂಡಿಸುತ್ತಿರುವ ಕೀರ್ತಿ ಹೊಂದುತ್ತಿರುವುದು ಅವರ ಆಪ್ತ ವಲಯದಲ್ಲಿರುವ ನಮಗೂ ಸಂತಸ ತಂದಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದ ಸುದೀರ್ಘ ಅವಧಿಗೆ ಮುಖ್ಯಮಂತ್ರಿ  ಎಂಬ ದಾಖಲೆ ಪಡೆಯಲಿರುವ ಸಿದ್ಧರಾಮಯ್ಯನವರು ಬೆಳಗಾವಿಯ ಸುವರ್ಣಸೌಧದಲ್ಲಿ ಬಜೆಟ್ ಅಧಿವೇಶನ ನಡೆಸುವ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಬೇಕೆಂದು‌ ಮಾಜಿ ಸಂಸದ ರಮೇಶ‌ ಕತ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿರುವ ಅವರು,   ಜನತಾಪರಿವಾರದಿಂದ ಬೆಳೆದು ಬಂದ ಸಿದ್ಧರಾಮಯ್ಯನವರು ಬಡವರ, ಶೋಷಿತರ ಹಾಗೂ ನಾಡಿನ ಹಿಂದುಳಿದ ಜನರಧ್ವನಿಯಾಗಿ ರಾಜ್ಯದ ಅತಿಹೆಚ್ಚು ಅವಧಿ ಪೂರ್ಣಗೊಳಿಸುವ ಜೊತೆಗೆ, ಅತಿ ಹೆಚ್ಚು16 ಬಜೆಟ್ ಮಂಡಿಸಿ 17ನೇ ಬಜೆಟ್ ಮಂಡಿಸುತ್ತಿರುವ ಕೀರ್ತಿ ಹೊಂದುತ್ತಿರುವುದು ಅವರ ಆಪ್ತ ವಲಯದಲ್ಲಿರುವ ನಮಗೂ ಸಂತಸ ತಂದಿದೆ ಎಂದರು.

ಈಗಾಗಲೇ ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸರಕಾರಗಳಿಂದ ಸೂಕ್ತ ಸ್ಪಂದನೆ ಸಿಗದೇ ಈ ಭಾಗದ ಜನ ರೋಸಿ ಹೋಗಿದ್ದಾರೆ. ಮೈಸೂರ ಕರ್ನಾಟಕಕ್ಕೆ ಸರಕಾರಗಳು ಸೀಮಿತವಾದ ಆರೋಪವನ್ನು 62ನೇ ವರ್ಷದ ಕರ್ನಾಟಕ ಏಕೀಕರಣದ ನೆನಪು ಉಳಿಸಬೇಕಿದೆ ಎಂದರು.

Home add -Advt

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸ್ಥಾಪಿಸಿದ ಸುವರ್ಣ ಸೌಧ ಚಳಿಗಾಲದ‌ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಿದ್ದು, ಎಲ್ಲ ದಾಖಲೆಗಳನ್ನು ಮುರಿದಿರುವ ಸಿದ್ದರಾಮಯ್ಯ ಸರಕಾರ ಈ ಬಾರಿ ಬೆಳಗಾವಿಯಲ್ಲಿಯೇ ಬಜೆಟ್ ಅಧಿವೇಶನ‌ ನಡೆಸಿದರೆ  ಸಿದ್ದರಾಮಯ್ಯನವರ ನೇತೃತ್ವದ ಸರಕಾರಕ್ಕೆ ಅದರ ಕೀರ್ತಿ ಸಲ್ಲುತ್ತದೆ ಎಂದರು.

ಈ ಕುರಿತು ಉತ್ತರ ಕರ್ನಾಟಕದ ಮಠಾಧೀಶರು, ಎಲ್ಲ‌  ಪಕ್ಷದ ಮುಖಂಡರು, ಶಾಸಕರು, ಸಂಸದರು,‌ ಮಾಜಿ ಶಾಸಕ-ಸಂಸದರು ಹಾಗೂ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸರಕಾರವನ್ನು ಪಕ್ಷಾತೀತವಾಗಿ ಬೆಂಬಲಿಸುವ ಮೂಲಕ ಉತ್ತರ ಕರ್ನಾಟಕದಿಂದಲೇ ಅಖಂಡ ಕರ್ನಾಟಕದ ಅಭಿವೃದ್ಧಿ ಯೋಜನೆಗಳು ಘೋಷಿಸುವಂತಹ ಈ ಐತಿಹಾಸಿಕ ಅಧಿವೇಶನ ನಡೆಸಲು ಸರಕಾರವನ್ನು ಒತ್ತಾಯಿಸಬೇಕಿದೆ ಎಂದರು.

ಎಲ್ಲರೂ ಒಗ್ಗಟ್ಟಾಗಿ ಬಂದರೆ ನಾನು ಸಹ ಉತ್ತರ ಕರ್ನಾಟಕ ಅಭಿವೃದ್ಧಿ ಆಕಾಂಕ್ಷಿಯಾಗಿ ಎಲ್ಲ ಹಿರಿಯ ಕಿರಿಯರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸರಕಾರವನ್ನು ಈ ಕುರಿತು ಒತ್ತಾಯಿಸುತ್ತೇನೆ ಎಂದರು.


ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ‌ ನಡೆಸುವ ಸರಕಾರ ಕೈಕೊಳ್ಳಬೇಕು ಎನ್ನುವದು ಕೇವಲ ನನ್ನೊಬ್ಬನ ಬೇಡಿಕೆಯಲ್ಲ. ಇದು ಸಮಸ್ತ ಉತ್ತರ ಕರ್ನಾಟಕದ ಜನರ ಆಶಯವಾಗಿದೆ.
ರಮೇಶ ಕತ್ತಿ, ಮಾಜಿ ಸಂಸದ

Related Articles

Back to top button