ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅನೇಕ ಸವಾಲುಗಳ ನಡುವೆಯೂ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮುನ್ನಡೆಸುವ ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಕಲ್ಪ ಈ ಬಜೆಟ್ ನಿಂದ ಸಾಬೀತಾಗಿದೆ ಎಂದು ಶಾಸಕ ಅಭಿಯ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ನಿಂದ ಉಂಟಾಗಿದ್ದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳಿಂದ ಪಾರಾಗಿ ಮತ್ತೆ ಆರ್ಥಿಕತೆಯ ಚೇತರಿಕೆಗೆ ಇದು ಪ್ರೇರಣೆ ನೀಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ ಪರಸ್ಪರ ಸಹಕಾರ ಮತ್ತು ಸಂಯೋಜನೆಗಳು ವೃದ್ಧಿಸಲು ಕಾರಣವಾಗುತ್ತವೆ. ಜನರ ಬೇಡಿಕೆ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಈ ಬಜೆಟ್ ನಲ್ಲಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ವಿಶೇಷ ಎಂದು ಅವರು ಹೇಳಿದ್ದಾರೆ.
ಎಲ್ಲ ಸಮುದಾಯಗಳ ಒಳಿತನ್ನೂ ಒಳಗೊಂಡಿರುವ ಈ ಬಜೆಟ್ ನಮ್ಮ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ. ತನ್ಮೂಲಕ ತಾವು ಕಾಮನ್ ಮ್ಯಾನ್ ಸಿ.ಎಂ. ಎಂದು ಮತ್ತೊಮ್ಮೆ ಬೊಮ್ಮಾಯಿಯವರು ಸಾಬೀತುಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಹೆಚ್ಚಳಕ್ಕಾಗಿ ದಾಖಲೆ ಹಣ ನಿಗದಿಪಡಿಸಿರುವುದರಿಂದ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಗುಣಮಟ್ಟ ಮತ್ತು ಆರೋಗ್ಯ ಸೇವೆ ಹೆಚ್ಚಲು ಕಾರಣವಾಗಲಿದೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
• ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯ ನಿರ್ಮಾಣದಂತಹ ಆದ್ಯತಾ ವಲಯಗಳಿಗೆ ಈ ಬಾರಿ ಹೆಚ್ಚಿನ ವರದಾನ ಲಭಿಸಿರುವುದರಿಂದ ನಮ್ಮ ರಾಜ್ಯಕ್ಕೆ ಇದರಿಂದ ದೀರ್ಘಕಾಲಿಕ ಪ್ರಯೋಜನ ಲಭಿಸಲಿದೆ ಎಂದಿದ್ದಾರೆ.
ಸರಕಾರಿ ನೌಕರರಿಗೆ ಗುಡ್ ನ್ಯೂಸ್: 7ವೇತನ ಆಯೋಗದ ವರದಿ ಜಾರಿ ಖಚಿತ; ಯಡಿಯೂರಪ್ಪ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ