Kannada NewsKarnataka NewsLatest
*BREAKING: ನಿರ್ಮಾಣ ಹಂತದ ಕಟ್ಟಡದ ಸಜ್ಜಾ ಕುಸಿದು ದುರಂತ: ಇಬ್ಬರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ನಿರ್ಮಾಣ ಹಂತದ ಕಟ್ಟಡದ ಸಜ್ಜಾ ಕುಸಿದು ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬೆಳ್ಳಂದೂರು ಬಳಿಯ ಇಂಪಿರಿಯಲ್ ಟೆಕ್ ಪಾರ್ಕ್ ಪ್ರೈ.ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಇಬ್ಬರು ಕಾರ್ಮಿಕರು ಸಜ್ಜಾ ಕುಸಿದು ಸಾವನ್ನಪ್ಪಿದ್ದಾರೆ.
ಕಟ್ಟಡದ 13ನೇ ಫ್ಲೋರ್ ನಿಂದ ಬಿದ್ದು ಈ ದುರಂತ ಸಂಭವಿಸಿದೆ. ಪಶ್ಚಿಮ ಬಂಗಾಳ ಮೂಲದ ಅಮೀರ್ ಹುಸೇನ್ ಹಗೂ ಮುಮ್ತಾಜ್ ಅಲಿ ಮೃತ ಕಾರ್ಮಿಕರು. ಪ್ರಕರಣ ಸಂಬಂಧ ಇಂಪಿರಿಯಲ್ ಟೆಕ್ ಪಾರ್ಕ್ ಪ್ರೈ.ಲಿ ವಿರುದ್ಧ ಪ್ರಕರಣ ದಾಖಲಾಗಿದ್ದು, 6 ಜನರನ್ನು ವಶಕ್ಕೆ ಪಡೆಯಲಾಗಿದೆ.