Latest

ಮುಂಬೈಯಲ್ಲಿ ಕಟ್ಟಡ ದುರಂತ: 11 ಸಾವು; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಮುಂಬೈ ಮಲಾಡ್ ವೆಸ್ಟ್ ಪ್ರದೇಶದಲ್ಲಿ ಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು, ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ.

ಬುಧವಾರ ರಾತ್ರಿ 10.30ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಸಚಿವ ಅಸ್ಲಂ ಶೇಖ್ ಧಾವಿಸಿ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಂಡರು.

ಮೊದಲು ಜಿ + 2 ಕಟ್ಟಡ ಮತ್ತೊಂದು ಕಟ್ಟಡದ ಮೇಲೆ ಕುಸಿದಿದೆ.  ಒಂದರ ಮೇಲೆ ಇನ್ನೊಂದು ಮನೆಯಂತೆ ಬಿದ್ದ ಪರಿಣಾಮ ಒಂದೊಂದಾಗಿ ಮನೆಗಳು ಕುಸಿದು ಬಿದ್ದಿವೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯುವ ಕಾರ್ಯ ನಡೆದಿದೆ. ಈವರೆಗೆ 11 ಜನರು ಮೃತರಾಗಿರುವುದು ಖಚಿತವಾಗಿದೆ. 8 ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಕಾರ್ಯಾಚರಣೆ ಮುಂದುವರಿದಿದೆ. ಘಟನೆಗೆ ಕಾರಣವನ್ನು ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಶನರ್ ದಿಲೀಪ್ ಸಾವಂತ ತಿಳಿಸಿದ್ದಾರೆ.

Home add -Advt

 

 

ಜೂನ್ 15ರಿಂದ ಶಿಕ್ಷಕರ ಹಾಜರಾತಿ: ಶಿಕ್ಷಕರ ಸಂಘಟನೆಗಳ ವಿರೋಧ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button