Latest

ಏರ್ ಪೋರ್ಟ್ ನಲ್ಲಿ ನಕಲಿ ಐಡಿ ಬಳಸಿ ಸಿಕ್ಕಿಬಿದ್ದು “ನನ್ನ ಮಗನಿಗೆ ಹೇಳಬೇಡಿ” ಎಂದ ಉದ್ಯಮಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಗುರುತಿನ ಚೀಟಿ ಬಳಸಿದ ಉದ್ಯಮಿಯೊಬ್ಬರು ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.

ಇಷ್ಟಾದರೆ ಇದೊಂದು ಮಾಮೂಲಿ ಅಪರಾಧ ಪ್ರಕರಣವಾಗಿ ಉಳಿಯುತ್ತಿತ್ತೇನೋ, ಆದರೆ ಇಷ್ಟಕ್ಕೇ ಬಿಡದ ಉದ್ಯಮಿ “ಈ ವಿಷಯ ನನ್ನ ಮಗನಿಗೆ ಹೇಳಬೇಡಿ” ಎಂದು CISF ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡಿದ್ದು, ಅದಕ್ಕೆ CISF ಸಂಪೂರ್ಣ ಸಮ್ಮತಿ ಸೂಚಿಸಿದ್ದು ಸುದ್ದಿಗೆ ಕೌತುಕದ ಗುದ್ದು ನೀಡಿದೆ.

ದಕ್ಷಿಣ ಮುಂಬೈ ನಿವಾಸಿ ಉದ್ಯಮಿ ಚಿಂತನ್ ಗಾಂಧಿ ಸಿಕ್ಕಿಬಿದ್ದ ಆರೋಪಿ. ಅವರ ಮಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೊರಟಿದ್ದ. ಆತನನ್ನು ಏರ್ ಪೋರ್ಟ್ ವರೆಗೆ ಬಿಡಲು ಹೋಗಿದ್ದ ಚಿಂತನ್  ಬೋರ್ಡಿಂಗ್ ಗೇಟ್ ತನಕ ಮಗನನ್ನು ನೋಡಬೇಕೆಂದು ಬಯಸಿ ಅಲ್ಲಿ ಪ್ರವೇಶಿಸುತ್ತಿದ್ದರು. ಈ ವೇಳೆ ಅವರನ್ನು ತಡೆದ CISF ಇನ್ಸ್ಪೆಕ್ಟರ್ ಸುಮಿತ್ ಸಿಂಗ್, ವಿದೇಶಕ್ಕೆ ಪ್ರಯಾಣಿಸುವವರು ಮಾತ್ರ ಬೋರ್ಡ್ ಪ್ರವೇಶಿಸಬಹುದು. ಇತರ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ತಾನೊಬ್ಬ CISF ಅಧಿಕಾರಿ ಎಂದು ಹೇಳಿ ಗುರುತಿನ ಚೀಟಿಯನ್ನು ಹೊರತೆಗೆದು ಕೊಟ್ಟಿದ್ದೇ ಚಿಂತನ್ ಗಾಂಧಿಯ ಹಣೆಬರಹ ತಿರುಚಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಇವರ ಗುರುತಿನ ಚೀಟಿ ಬಗ್ಗೆ ಸಂದೇಹ ಉಂಟಾಗಿ ಪರಿಶೀಲನೆಗೆ ಗುರಿಪಡಿಸಿದಾಗ ಅದು ನಕಲಿ ಎಂಬುದು ಗೊತ್ತಾಯಿತು.

ಆದರೆ ಈ ವಿಷಯ ಗುಲ್ಲೆದ್ದು ಹೋಗುವ ಭೀತಿಯ ಮಧ್ಯೆಯೂ ಚಿಂತನ್ ಗಾಂಧಿ CISF ಸಿಬ್ಬಂದಿಯಲ್ಲಿ ಅಂಗಲಾಚಿ ಕೇಳಿಕೊಂಡಿದ್ದು “ಈ ವಿಷಯ ನನ್ನ ಮಗನಿಗೆ ಹೇಳಬೇಡಿ” ಎಂಬುದು. ತಪ್ಪು ಮಾಡಿದ್ದೇನೋ ನಿಜ. ಆದಾಗ್ಯೂ ಈ ಬಿನ್ನಹವನ್ನು ಗಂಭೀರವಾಗಿ ಪರಿಗಣಿಸಿದ CISF ಅಧಿಕಾರಿಗಳು ಸಂಪೂರ್ಣ ಸಮ್ಮತಿ ಸೂಚಿಸಿದರು.

ವಿಷಯ ಚಿಂತನ್ ಅವರ ಮಗನಿಗೆ ಗೊತ್ತಾಗಿದೆಯೋ ಇಲ್ಲವೋ, ಆದರೆ ಜಗಜ್ಜಾಹೀರಾಗಿರುವುದಂತೂ ಸತ್ಯ.

*ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ವಿಚಾರ; ಯಾವುದೇ ತೊಡಕಿಲ್ಲ ಎಂದ ಸಿಎಂ*

https://pragati.taskdun.com/panchamasaliokkaligareservationcm-basavaraj-bommaireactionhubli/

ಅಪಘಾತದ ವೇಳೆ ರಿಷಭ್ ಪಂತ್ ನಶೆಯಲ್ಲಿದ್ರಾ? ಎಂಬುದಕ್ಕೆ ಪೊಲೀಸ್ ಅಧಿಕಾರಿಗಳು ಹೇಳಿದ್ದೇನು?

https://pragati.taskdun.com/was-pant-drunk-at-the-time-of-the-accident-what-did-the-police-officers-say/

*ಕಾಡಾನೆ ದಾಳಿ: ಅರಣ್ಯ ಇಲಾಖೆ ಸಿಬ್ಬಂದಿಯೇ ಬಲಿ; ಓರ್ವನ ಸ್ಥಿತಿ ಗಂಭೀರ*

https://pragati.taskdun.com/elephant-attackwatcher-deathh-d-kote/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button