
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣಾ ಅಖಾಡ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದೆ. ಈ ನಡುವೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಿಮ್ಮ ಬಳಿ ಬಂಡೆ ಇರಬಹುದು ಆದರೆ ನಿಮ್ಮಿಂದಲೇ ಬಂದ ಡೈನಮೈಟ್ ನಿಮ್ಮ ಬಂಡೆಯನ್ನೇ ಪುಡಿ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಚುನಾವಣೆಯಲ್ಲಿ ಜಾತಿ ರಾಜಕಾರಣ ನಡೆಯಲ್ಲ. ಅಭಿವೃದ್ಧಿ ರಾಜಕೀಯ ಮಾತ್ರ ಪರಿಗಣನೆಯಾಗಲಿದೆ. ಆರ್.ಆರ್.ನಗರ ಉಚುನಾವಣೆಯಲ್ಲಿ ಮುನಿರತ್ನ ಗೆಲ್ಲಲಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮೂಲಕ ಅವರು ಜನರ ಹೃದಯದಲ್ಲಿದ್ದಾರೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಹಾಗೂ ಅರವಿಂದ ಲಿಂಬಾವಳಿ ಜೋಡೆತ್ತುಗಳಿದ್ದಂತೆ. ಮುನಿರತ್ನರನ್ನು ಕ್ಷೇತ್ರದಲ್ಲಿ ಗೆಲ್ಲಿಸುವ ಜವಾಬ್ದಾರಿ ಅವರ ಮೇಲಿದೆ. ಡಿ.ಕೆ.ಶಿವಕುಮಾರ್ ಜೈಲಿಗೆ ಹೋದಾಗಲೂ ಮೆರವಣಿಗೆ, ಜೈಲಿನಿಂದ ಬಂದಾಗಲೂ ಮೆರವಣಿಗೆ, ಕುಂತರೂ, ನಿಂತರೂ ಮೆರವಣಿಗೆ. ಜನರೇ ಡಿಕೆಶಿಯನ್ನು ಮನೆಗೆ ಕಳಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.



