17 ಕ್ಷೇತ್ರಗಳ ಉಪಚುನಾವಣೆ: ಕಾಂಗ್ರೆಸ್ ರಣಕಹಳೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ರಾಜ್ಯ ರಾಜಕೀಯ ಮತ್ತೆ ರಂಗೇರುತ್ತಿದೆ. 17 ಶಾಸಕರ ರಾಜಿನಾಮೆಯ ನಂತರ ಅವರನ್ನೆಲ್ಲ ಅನರ್ಹ ಮಾಡಿರುವ ಕಾಂಗ್ರೆಸ್- ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯನ್ನೂ ಮಾಡಿವೆ.
ಇಷ್ಟಕ್ಕೂ ಸುಮ್ಮನಾಗದೆ ಆ ಎಲ್ಲ 17 ಕ್ಷೇತ್ರಗಳಿಗೆ ಉಪಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ದತೆ ಮಾಡಿದೆ. ಪಕ್ಷದ ಹಿರಿಯ ನಾಯಕರನ್ನು ಈ ಎಲ್ಲ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡುವ ಮೂಲಕ ಉಪಚುನಾವಣೆಗೆ ಈಗಲೆ ರಣಕಹಳೆ ಮೊಳಗಿಸಿದೆ.
17 ಕ್ಷೇತ್ರಗಳಿಗೆ ಒಟ್ಟೂ 69 ವಿಕ್ಷಕರನ್ನು ನೇಮಕ ಮಾಡಲಾಗಿದೆ. ಒಂದೊಂದು ಕ್ಷೇತ್ರಕ್ಕೆ 3ರಿಂದ 5 ಜನರನ್ನು ನೇಮಿಸಲಾಗಿದೆ.
ಎಂ.ಬಿ.ಪಾಟೀಲ, ಆರ್.ಬಿ.ತಿಮ್ಮಾಪುರ ಹಾಗೂ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಅಥಣಿ ಕ್ಷೇತ್ರದ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಸತೀಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಎಚ್.ವೈ.ಮೇಟಿ ಹಾಗೂ ಗಣೇಶ ಹುಕ್ಕೇರಿ ಅವರನ್ನು ಕಾಗವಾಡಕ್ಕೆ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಶಿವಾನಂದ ಪಾಟೀಲ ಅಶೋಕ ಪಟ್ಟಣ, ಫಿರೋಜ್ ಸೇಠ್ ಹಾಗೂ ಮಹಾಂತೇಶ ಕೌಜಲಗಿ ಅವರನ್ನು ಗೋಕಾಕ ಕ್ಷೇತ್ರದ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಉಳಿದಂತೆ ವೀಕ್ಷಕರ ಪಟ್ಟಿ ಹೀಗಿದೆ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ