Latest

ಮೂಡಲಗಿಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಶೃದ್ಧಾಂಜಲಿ

    ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ಸೋಮವಾರ ಸಂಜೆ ಪಟ್ಟಣದ ಯುವ ಜೀವನ ಸೇವಾ ಸಂಸ್ಥೆ, ಗಾರ್ಡನ್ ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಕಲ್ಮೇಶ್ವರಬೋಧ ಸೇವಾ ಸಂಘದಿಂದ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ನೂರಾರು ಸಾರ್ವಜನಿಕರು ಮೊಂಬತ್ತಿ ಹಚ್ಚಿ ಶ್ರೀಗಳಿಗೆ ಶ್ರದ್ದಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸುಧೀರ ನಾಯರ್, ಈರಪ್ಪ ಢವಳೇಶ್ವರ, ಹನುಮಂತ ಸತರಡ್ಡಿ, ಸುಭಾಸ ಗೊಡ್ಯಗೋಳ, ಚೇತನ ನಿಶಾನಿಮಠ, ಗುರು ಗಂಗನ್ನವರ, ಜಗದೀಶ ತೇಲಿ, ಅರ್ಜುನ ಗಾಣಿಗೇರ, ಈಶ್ವರ ಢವಳೇಶ್ವರ, ಅಲ್ತಾಫ ಹವಾಲ್ದಾರ, ರವಿ ಗಡದನ್ನವರ, ಶಿವಾಜಿ ಮೌಳಿಕ, ರವಿ ಮೆಟಿಗೇರಿ, ಯಲ್ಲಪ್ಪ ಕುಂಬಾರ, ಮಹಾಂತೇಶ ಅಂಗಡಿ ಮತ್ತಿತರರು ಪಾಲ್ಗೊಂಡಿದ್ದರು.

 

Home add -Advt

ಕಡಾಡಿ ಶೋಕ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

Related Articles

Back to top button