Election NewsNationalPolitics

*ಮೂರು ರಾಜ್ಯಗಳ ಉಪ ಚುನಾವಣೆ ಮುಂದುಡಿಕೆ*

ಪ್ರಗತಿವಾಹಿನಿ ಸುದ್ದಿ : ನವೆಂಬರ್ 13ಕ್ಕೆ ನಿಗದಿಯಾಗಿದ್ದ ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 20ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.

ನವೆಂಬರ್ 13 ರಂದು ಉಪ-ಚುನಾವಣೆ ನಡೆಯುವ ದಿನದಂದು ದೊಡ್ಡ ಪ್ರಮಾಣದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಿರುವ ಹಿನ್ನಲೆ ಮತದಾನದ ಪ್ರಮಾಣ ಕಡಿಮೆಯಾಗಬಹುದು ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗಕ್ಕೆ ವಿವಿಧ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು ಮನವಿ ಮಾಡಿದ್ದರು.

ಅದರಂತೆ ಕೇರಳದ ಪಾಲಕ್ಕಾಡ್, ಪಂಜಾಬ್‌ನ ಡೇರಾ ಬಾಬಾ ನಾನಕ್, ಚಬ್ಬೇವಾಲ್, ಗಿಡ್ಡರ್‌ಬಾಹಾ ಮತ್ತು ಬರ್ನಾಲಾ ಸೇರಿದಂತೆ. ಯುಪಿಯ ಮೀರಾಪುರ್, ಕುಂದರ್ಕಿ, ಘಾಜಿಯಾಬಾದ್, ಖೈರ್, ಕರ್ಹಾಲ್ ಮತ್ತು ಮಜವಾನ್‌ನಂತಹ ಅಸೆಂಬ್ಲಿ ಸ್ಥಾನಗಳಿಗೂ ದಿನಾಂಕಗಳನ್ನು ಬದಲಾಯಿಸಲಾಗಿದೆ.

ಆದರೆ, ಕೇರಳದ ಚೇಲಕ್ಕರ ಉಪಚುನಾವಣೆ ದಿನಾಂಕ ಬದಲಾಗಿಲ್ಲ ಎಂದು ವರದಿಯಾಗಿದೆ. ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಬಹುತೇಕರು ನವೆಂಬರ್ 13 ರಿಂದ 15 ರವರೆಗೆ ಕಲ್ಪಾತಿ ರಸ್ತೋಲ್ಪವಂ ಹಬ್ಬವನ್ನು ಆಚರಿಸುತ್ತಾರೆ ಹೀಗಾಗಿ ಮತದಾನದ ಕಡೆ ಹೆಚ್ಚು ಒಲವು ಇರುವುದಿಲ್ಲ ಎನ್ನಲಾಗಿದೆ.

ನವೆಂಬರ್ ನಲ್ಲಿ ಶ್ರೀ ಗುರುನಾನಕ್ ದೇವ್ ಅವರ 555ನೇ ಪ್ರಕಾಶ್ ಪರ್ವ್ ಅನ್ನು ನವೆಂಬರ್ 15ರಿಂದ ಆಚರಿಸಲಾಗುತ್ತಿದ್ದು ನವೆಂಬರ್ 13ರಿಂದ ಅಖಂಡ ಪಥವನ್ನು ಆಯೋಜಿಸಲಾಗಿದೆ. ಅಲ್ಲದೇ ನವೆಂಬರ್ 15ರಿಂದ ಉತ್ತರ ಪ್ರದೇಶದಲ್ಲಿ ಕಾರ್ತಿಕ ಪೂರ್ಣಿಮೆ ಆಚರಿಸಲಾಗುತ್ತಿದ್ದು ಮೂರ್ನಾಲ್ಕು ದಿನಗಳ ಹಿಂದೆಯೇ ಜನರು ಪ್ರಯಾಣ ಆರಂಭಿಸುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button