ವಿಡಿಯೋ ಪ್ಲೇ ಮಾಡದಂತೆ 12 ಜನರಿಂದ ಸ್ಟೇ; ಅದರಲ್ಲಿ ಅಂಥದ್ದು ಏನಿದೆ; ಸಿ.ಎಂ.ಇಬ್ರಾಹಿಂ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಕ್ಕೆ ಹೇಳಬೇಕಾದ ಭಾಷೆಯಲ್ಲಿಯೇ ಹೇಳಿದ್ದಾರೆ ಎಂದು ಹೇಳುವ ಮೂಲಕ ರಮೇಶ್ ಕುಮಾರ್ ಹೇಳಿಕೆಯನ್ನು ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಇಬ್ರಾಹಿಂ, ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಹೇಳಿದರೂ ಅರ್ಥವಾಗುತ್ತಿರಲಿಲ್ಲ, ಕನ್ನಡ, ಇಂಗ್ಲೀಷ್ ಹೀಗೆ ಯಾವ ಭಾಷೆಯಲ್ಲಿ ಹೇಳಿದರೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ ರಮೇಶ್ ಕುಮಾರ್ ಭಾಷೆಯೇ ಸರಿಯಾಗಿದೆ. ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ ಎಂದರು.
ಹೆಣ್ಮಕ್ಕಳಿಗೆ ಅವಮಾನ ಮಾಡಬೇಕೆಂದು ಅವರು ಹೇಳಿರಲಿಕ್ಕಿಲ್ಲ. ನನಗೂ 8 ಜನ ಹೆಣ್ಮಕ್ಕಳಿದ್ದಾರೆ. ನೋವಾಗುವತೆ ಮಾತನಾಡಬಾರದು. ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಯಾವ ದೃಷ್ಟಿಕೋನದಲ್ಲಿ ಹೇಳಿದರು ಎಂಬುದು ಮುಖ್ಯವಾಗುತ್ತೆ ಎಂದು ಹೇಳಿದರು.
12 ಜನರು ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ ನಿಂದ ಸ್ಟೇ ತಂದಾಗ ಬಿಜೆಪಿ ನಾಯಕರು, ಸಂಘ ಪರಿವಾದವರು ಸುಮ್ಮನಾಗಿರುವುದೇಕೆ? ಸದಾನಂದ ಗೌಡರು ಕೂಡ ಸ್ಟೇ ತಂದರು. ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ ಎಂದರೆ ಅದರಲ್ಲಿ ಅಂಥದ್ದೇನಿದೆ. ಮಾನವಂತರಾಗಿದ್ದರೆ ಸ್ಟೇ ತರವಂತದ್ದೇನಿರುತ್ತೆ? ಎಂದು ಪ್ರಶ್ನಿಸಿದ್ದಾರೆ.
ಸದನದಲ್ಲಿ ಕ್ಷಮೆ ಕೋರಿದ ರಮೇಶ್ ಕುಮಾರ್ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ