ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಬಂದಿದ್ದು, ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ಯೋಗೇಶ್ವರ್, ಸಿಎಂ ಬದಲಾವಣೆ ವಿಚಾರ ಯಾಕೆ ಚರ್ಚೆಗೆ ಬಂತು ಗೊತ್ತಿಲ್ಲ. ನನಗೆ ಅಂತಹ ಯಾವುದೇ ಉದ್ದೇಶವೂ ಇಲ್ಲ. ನನ್ನ ಸಮಸ್ಯೆಯೇ ಬೇರೆ ಆ ಬಗ್ಗೆ ಚರ್ಚಿಸಲು ಹೋಗಿದ್ದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿ.ಪಿ.ಯೊಗೇಶ್ವರ್, ನಮ್ಮ ಸರ್ಕಾರ ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ. ಮೂರು ಪಕ್ಷದ ಹೊಂದಾಣಿಕೆ ಸರ್ಕಾರವಾಗಿದೆ. ಈ ಬಗ್ಗೆ ನಾನು ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಹೇಳಿದ್ದೆ. ಇದು ಬಿಜೆಪಿ ಸರ್ಕಾರದಂತೆ ಕಾಣುತ್ತಿಲ್ಲ, ಈ ರೀತಿ ಮಾಡುವುದು ಸರಿಯಲ್ಲ ಎಂದು. ನನ್ನ ಸಚಿವಗಾರಿಕೆಯನ್ನು ನನ್ನ ಮಗ ಚಲಾಯಿಸುವುದನ್ನು ನಾನು ಸಹಿಸಲ್ಲ. ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪ ಸಹಿಸಲಾಗದು ಎಂದು ಹೇಳುವ ಮೂಲಕ ಬಿ.ವೈ ವಿಜಯೇಂದ್ರ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರ ಇದೆಲ್ಲ ನನಗೆ ಮುಖ್ಯವಲ್ಲ. ನನಗೆ ಆ ಉದ್ದೇಶವೂ ಇಲ್ಲ. 2023ರಲ್ಲಿ ನಾನು ಸ್ಪರ್ಧಿಸಬೇಕು. ನನಗೆ ನನ್ನದೇಯಾದ ಸಮಸ್ಯೆಗಳಿವೆ. ನಾನು ಮಾಧ್ಯಗಳ ಮುಂದೆ ಈ ಬಗ್ಗೆ ಚರ್ಚೆ ಮಾಡಲಾಗಲ್ಲ. ಅದನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುತ್ತೇನೆ ಎಂದರು.
ಆರೋಗ್ಯ ಸಚಿವ ಸುಧಾಕರ್ ಆರೋಗ್ಯದಲ್ಲಿ ಏರುಪೇರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ