Latest

ಜೂನ್ 8ರಿಂದ ಪ್ರವಾಸಿತಾಣಗಳು ಓಪನ್; ಟೂರಿಸ್ಟ್ ವಾಹನಗಳಿಗೆ ತೆರಿಗೆ ಕಡಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರವಾಸೋದ್ಯಮದ ಕ್ಷೇತ್ರ ಶೇ.100ರಷ್ಟು ನಷ್ಟ ಅನುಭವಿಸಿದೆ. ಸುಮಾರು‌ 35 ಲಕ್ಷ ಮಂದಿ ಇದನ್ನೇ ಅವಲಂಬಿಸಿದ್ದಾರೆ. ಜೂನ್ 8 ರಿಂದ ದೇಶದಾದ್ಯಂತ ಹೋಟೆಲ್‌ಗಳು, ಪ್ರವಾಸಿತಾಣಗಳು ತೆರೆಯಲಿವೆ. ಟೂರಿಸ್ಟ್ ವಾಹನಗಳಿಗೆ ಶೇ.50ರಷ್ಟು ತೆರಿಗೆ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ ರಾಜ್ಯದಲ್ಲಿ ಈಗ ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೇವೆ. ಟೂರಿಸ್ಟ್ ವಾಹನಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.100ರಷ್ಟು ವಾಹನ ತೆರಿಗೆ ಘೋಷಣೆ ಮಾಡಲಾಗಿತ್ತು. ಈಗ ಜೂನ್ ತಿಂಗಳಲ್ಲಿ ಶೇ.50ರಷ್ಟು ವಾಹನ ತೆರಿಗೆ ಕಡಿತ ಮಾಡಲು ನಿರ್ಧಾರ ಮಾಡಿದ್ದೇವೆ. ಕರ್ನಾಟಕಕ್ಕೆ ಬರುವ ಬೇರೆ ರಾಜ್ಯಗಳ ವಾಹನಗಳ ಪ್ರವೇಶ ಶುಲ್ಕ ವಿನಾಯಿತಿ ನೀಡುವಂತೆ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ ಎಂದರು.

ಇತರೆ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ ಕಲ್ಪಿಸಲು ತೀರ್ಮಾನ ಮಾಡಿದ್ದೇವೆ. ಕೊಪ್ಪಳ ಸಮೀಪದ ಬಹದ್ದೂರ ಬಾಂಡ ಗ್ರಾಮದಲ್ಲಿ ಬಂಜಾರ ಹೆರಿಟೇಜ್ ವಿಲೇಜ್ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಬಂಜಾರ ಅಭಿವೃದ್ಧಿ ನಿಗಮ ಮತ್ತು ಕೆ ಎಸ್ ಟಿ ಡಿಸಿ ಸಹಯೋಗದಲ್ಲಿ ಈ ಯೋಜನೆ ಆಗಲಿದೆ. ಜತೆಗೆ, ಆದಿವಾಸಿ ಕಲ್ಚರಲ್ ಹೆರಿಟೇಜ್ ಅನ್ನು ರಾಮನಗರದ ಜಾನಪದ ಲೋಕದಲ್ಲಿ ಸ್ಥಾಪನೆ ಮಾಡಲು ನಿರ್ಣಯಿಸಲಾಗಿದೆ. ಇನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ‘ಅಗ್ರಿ ಟೂರಿಸಂ’ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button