Latest

ಗಡ್ಡಧಾರಿ ಸಿಎಂ: ಭವಿಷ್ಯ ನಿಜವಾದ್ರೆ ಹಲವರು ಗಡ್ಡ ಬಿಡ್ತಾರೆ ಎಂದ ಸಿ.ಟಿ ರವಿ

ಪ್ರಗತಿವಾಹಿನಿ ಸುದ್ದಿ; ವಿಜಯನಗರ/ಚಿಕ್ಕಮಗಳೂರು: ಮುಂದಿನ ಮಾರ್ಚ್ ತಿಂಗಳಿಗೆ ಗಡ್ಡಧಾರಿ ರಾಜ್ಯದ ಸಿಎಂ ಆಗ್ತಾರೆ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮೈಲಾರದ ಧರ್ಮಕರ್ತರು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ನೀಡಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರು ಕೇವಲ 6-7 ತಿಂಗಳು ಮಾತ್ರ ರಾಜ್ಯಭಾರ ಮಾಡ್ತಾರೆ ಮಾರ್ಚ್ ನಲ್ಲಿ ಗಡ್ಡಧಾರಿಯೊಬ್ಬರು ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ್ದಾರೆ.

Related Articles

ಮಲಾರಲಿಂಗ ಧರ್ಮಕರ್ತರ ಭವಿಷ್ಯವಾಣಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಾನು ಸಿಎಂ ಆಗ್ಬೇಕು ಎಂದು ಗಡ್ಡ ಬಿಟ್ಟಿಲ್ಲ. ಕಾಲೇಜಿನಗಳಿಂದ ಗಡ್ಡ ಬಿಟ್ಟಿದ್ದೇನೆ. ಗಡ್ಡಧಾರಿ ಸಿಎಂ ಆಗ್ತಾರೆ ಎಂಬ ಭವಿಷ್ಯ ನಿಜವಾದರೆ ಮುಂದೆ ಹಲವರು ಗಡ್ಡ ಬಿಡಬಹುದು. ಇನ್ನು ಗಡ್ಡ ನನ್ನ ಐಡೆಂಟಿಟಿ. ಹಣೆಗೆ ಕುಂಕುಮ, ಕಿವಿಯಲ್ಲಿ ಮುರಾ, ಗಡ್ಡ ನನ್ನ ಗುರುತಿಸಲು ಸುಲಭ ಸಂಕೇತ ಹಾಗಾಗಿ ನಾನು ಮೊದಲಿನಿಂದಲೂ ಗಡ್ಡ ಬಿಟ್ಟಿದ್ದೇನೆ ಹೊರತು ಬೇರಾವ ಉದ್ದೇಶವಿಲ್ಲ ಎಂದರು.

ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯ

Home add -Advt

Related Articles

Back to top button