Latest

ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರ; ಸ್ವಪಕ್ಷದ ನಾಯಕರಿಂದಲೇ ಬಯಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿಯೇ ಬಯಲು ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಸಿ.ಟಿ ರವಿ, ಕಾಂಗ್ರೆಸ್ ನಾಯಕರೇ ಕೆಪಿಸಿಸಿ ಅಧ್ಯಕ್ಷರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ. ಕೆಪಿಸಿಸಿಗೆ ಎಂಥ ದುರ್ಗತಿ ಬಂದಿರಬೇಕು? ಡಿ.ಕೆ.ಶಿ ಕಲೆಕ್ಷನ್ ಗುಟ್ಟನ್ನು ಅವರದೇ ಪಕ್ಷದ ಮುಖಂಡರಾದ ಉಗ್ರಪ್ಪ, ಸಲೀಂ ಗುಸುಗುಸು ಮಾತಿನಲ್ಲೇ ಜಗಜ್ಜಾಹೀರು ಮಾಡಿದ್ದಾರೆ ಇನ್ನು ಕಾಣದ ಕಲೆಕ್ಷನ್ ಎಷ್ಟಿರಬೇಕು? ಎಂದು ಪ್ರಶ್ನಿಸಿದ್ದಾರೆ.

Related Articles

ಒಂದು ಕಡೆ ತಮ್ಮ ನಾಯಕನನ್ನು ಹೊಗಳಿ, ಇನ್ನೊಂದು ಕಡೆ ಜನತೆ ಮುಂದೆ ನಿಮ್ಮನ್ನು ಬೆತ್ತಲು ಮಾಡಲು ಸಿದ್ದರಾಮಯ್ಯ ಶಿಷ್ಯಂದಿರು ಹೊರಟಂತಿದೆ. ಸಿದ್ದರಾಮಯ್ಯನವರ ಶಿಷ್ಯ ಪಡೆ ಡಿ.ಕೆ.ಶಿವಕುಮಾರ್ ಅವರಿಗೆ ಖೆಡ್ಡಾ ತೋಡಲು ಸಜ್ಜಾದಂತಿದೆ ಯಾವುದಕ್ಕೂ ಡಿ.ಕೆ.ಶಿವಕುಮಾರ್ ಅವರೇ ಎಚ್ಚರದಿಂದ ಇರಿ ಎಂದಿದ್ದಾರೆ.
ಕೋಲಾಹಲಕ್ಕೆ ಕಾರಣವಾದ ‘ಕೈ’ ನಾಯಕರ ಹೇಳಿಕೆ; ವಿ.ಎಸ್.ಉಗ್ರಪ್ಪ ಅಮಾನತು

Home add -Advt

Related Articles

Back to top button