ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಡ್ರಗ್ಸ್ ಹಣ ಬಳಸಿದ್ದರು ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಸಿ.ಟಿ ರವಿ, ಕುಮಾರಸ್ವಾಮಿಯವರು ಮತ್ತಿನಲ್ಲಿ ಹೇಳಿದ್ದಾರಾ? ಮೊದಲು ಅವರ ತಪಾಸಣೆ ನಡೆಸಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿಚಾರ ಈಗ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ, ಕುಮಾರಸ್ವಾಮಿ ಅವರನ್ನು ಮೊದಲು ತಪಾಸಣೆ ಮಾಡಬೇಕು. ಅವರು ಮತ್ತಿನಲ್ಲಿ ಹೇಳಿದ್ದಾರಾ? ಅಥವಾ ಸರಿಯಾಗಿದ್ದಾಗಿ ಆ ಹೇಳಿಕೆ ಕೊಟ್ಟಿದ್ದಾರಾ ಟೆಸ್ಟ್ ಮಾಡಿಸಬೇಕು ಎಂದರು.
ಅವರ ಸಂಪುಟದ ಸಚಿವರೇ ರಾಜೀನಾಮೆ ಕೊಟ್ಟಿದ್ದು. ಕುಮಾರಸ್ವಾಮಿ ಕಾಲದ ಇಂಟಲಿಜೆನ್ಸ್ ದುರ್ಬಲವಾಗಿತ್ತಾ? ಸಿಎಂ ಆಗಿದ್ದಾಗ ಅವರು ಡ್ರಗ್ಸ್ ಜಾಲ ಮಟ್ಟಹಾಕಲಾಗದಷ್ಟು ದುರ್ಬಲ ಸುಎಂ ಆಗಿದ್ದರಾ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಪ್ರಚಾರದ ಗೀಳಿಗೆ ಕುಮಾರಸ್ವಾಮಿ ಇಂತಹ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವ ಇಚ್ಛಾ ಶಕ್ತಿಯಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ