Latest

ಸಿದ್ರಾಮುಲ್ಲಾಗೆ ಖುಷಿಯಾಗುವುದನ್ನೇ ಹೇಳಿದ್ದೇನೆ ಎಂದ ಸಿ.ಟಿ.ರವಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ನಾನು ಸಿದ್ದರಾಮಯ್ಯನವರಿಗೆ ಪ್ರಿಯವಾದುದನ್ನೇ ಹೇಳಿದ್ದೇನೆ. ಅವರಿಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಟ್ಟಿರುವುದು ಮಡಿಕೇರಿ-ಮೈಸೂರಿನ ಜನ. ಅವರಿಗೆ ಪ್ರಿಯವಾದದ್ದು ಟಿಪ್ಪು ಸುಲ್ತಾನ್, ಟಿಪ್ಪು ಟೋಪಿ. ಹಾಗಾಗಿ ಅದನ್ನೇ ಹೇಳಿದ್ದೇನೆ ಎಂದರು.

ಸಿದ್ದರಾಮಯ್ಯನವರಿಗೆ ಖುಷಿಯಾಗುವುದನ್ನೇ ಹೇಳಿದ್ದೇನೆ. ಅವರಿಗೆ ಖುಷಿ ಆಗದಿರುವುದು ಯಾವುದು? ಕುಂಕುಮ, ಕೇಸರಿ ಪೇಟ. ಅದರ ಬಗ್ಗೆ ಹೇಳಿದ್ದರೆ ಅವರಿಗೆ ಬೇಸರವಾಗುತ್ತಿತ್ತೋ ಏನೋ. ಆದರೆ ನಾನು ಟಿಪ್ಪು ಟೋಪಿ ಬಗ್ಗೆ ಹೇಳಿದ್ದೇನೆ. ಹಾಗಾಗಿ ಅವರು ಖುಷಿ ಪಡ್ತಾರೆ ಎಂದು ಹೇಳಿದ್ದಾರೆ.

ಸಿ.ಟಿ.ರವಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ನಿರ್ಧಾರ ವಿಚಹರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಸದ್ಭಾವನೆಯಿಂದ ಬಂದರೆ ಅತಿಥಿಗಳು ಎಂದು ಭಾವಿಸಿ ಸತ್ಕರಿಸುತ್ತೇವೆ. ನಮ್ಮಲ್ಲಿ ಅತಿಥಿಗಳನ್ನು ದೇವರು ಎಂದು ಭಾವಿಸುತ್ತೇವೆ. ಆದರೆ ದರ್ಪದಿಂದ ಬಂದರೆ ಅದೇ ಭಾವನೆಯಿಂದಲೇ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದ್ದಾರೆ.

Home add -Advt

ಅವರು ಜೋಡೆತ್ತುಗಳಲ್ಲ; ಚಿರತೆಗಳು; ಸಚಿವ ಶ್ರೀರಾಮುಲು ಆಕ್ರೋಶ

 

https://pragati.taskdun.com/shriramulucm-basavaraj-bommaisiddaramaihd-k-shivakumarkoppala/

Related Articles

Back to top button