
ಪ್ರಗತಿವಾಹಿನಿ ಸುದ್ದಿ: ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕಳ ಮುಂದೆಯೇ ಗಾಡಿ ಓಡಿಸುತ್ತಿದ್ದಾಗಲೇ ಹಸ್ತಮೈಥುನ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಕ್ಯಾಬ್ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
48 ವರ್ಷದ ಕ್ಯಾಬ್ ಚಾಲಕ ಲೋಮ್ ಶಂಕರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಮೌರಿಸ್ ನಗರದಿಂದ ಕಾಲೇಜಿಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಹತ್ತಿ ಕೆಲ ದೂರ ಹೋಗುತ್ತಿದ್ದಂತೆ ಕ್ಯಾಬ್ ಚಾಲಕ ಹಸ್ತಮೈಥುನಮಾಡಿಕೊಂಡು ಅಸಭ್ಯವಾಗಿ ವರ್ತಿಸತೊಡಗಿದ್ದಾನೆ. ಯುವತಿ ತಕ್ಷಣ ಕ್ಯಾಬ್ ನಿಲ್ಲಿಸುಉವಂತೆ ಹೇಳಿ ಕ್ಯಾಬ್ ನಿಂದ ಇಳಿದು ಹೋಗಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಯುವತಿ ದೂರುನ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡ ದೆಹಲಿ ಪೊಲೀಸರು ಆರೋಪಿ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.