ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಸಚಿವಸಂಪುಟ ವಿಸ್ತರಣೆ ಶನಿವಾರ ನಡೆಯಲಿದ್ದು, 24 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲಿಗೆ ಸಚಿವಸಂಪುಟ ಪರಿಪೂರ್ಣವಾಗಲಿದೆ.
ರಾಜ್ಯ ಸಂಪುಟಕ್ಕೆ 34 ಜನರ ಸೇರ್ಪಡೆಗೆ ಅವಕಾಶವಿದೆ. ಈಗಾಗಲೆ 10 ಜನರು ಸೇರಿಯಾಗಿದೆ. ಶನಿವಾರ 24 ಜನರ ಸೇರ್ಪಡೆಯಾದಲ್ಲಿ ಯಾವುದೇ ಸ್ಥಾನ ಖಾಲಿ ಉಳಿಯುವುದಿಲ್ಲ. ಶನಿವಾರ ಬೆಳಗ್ಗೆ 11.30ಕ್ಕೆ ರಾಜಭವನದಲ್ಲಿ ಸಂಪುಟ ವಿಸ್ತರಣೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಟ್ಟಿ ಫೈನಲ್ ಮಾಡಿ ಈಗಾಗಲೆ ದೆಹಲಿಯಿಂದ ಹೊರಟಿದ್ದಾರೆ.
ಮಾಹಿತಿ ಪ್ರಕಾರ ಶನಿವಾರ ಲಕ್ಷ್ಮೀ ಹೆಬ್ಬಾಳಕರ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಆರ್.ಬಿ.ತಿಮ್ಮಾಪುರ, ಎನ್.ಎಸ್.ಬೋಸರಾಜು, ಡಾ.ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಎಸ್.ಎಸ್.ಮಲ್ಲಿಕಾರ್ಜುನ, ಮಧು ಬಂಗಾರಪ್ಪ, ರಹೀಂ ಖಾನ್, ಡಾ.ಶರಣಪ್ರಕಾಶ್ ಪಾಟೀಲ್, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಡಿ.ಸುಧಾಕರ, ಮಂಕಾಳು ವೈದ್ಯ, ಹೆಚ್.ಕೆ.ಪಾಟೀಲ್, ಎಂ.ಸಿ.ಸುಧಾಕರ್, ಬಿ.ನಾಗೇಂದ್ರ, ಕೆ.ವೆಂಕಟೇಶ್, ಚಲುವರಾಯಸ್ವಾಮಿ, ಸಂತೋಷ ಲಾಡ್ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಅಂತಿಮ ಪಟ್ಟಿ ಇನ್ನು ಕೆಲವೇ ಹೊತ್ತಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ವಿನಯ ಕುಲಕರ್ಣಿ, ಲಕ್ಷ್ಮಣ ಸವದಿ, ಬಿ.ಕೆ.ಹರಿಪ್ರಸಾದ ಹೆಸರು ಕೈತಪ್ಪಿರುವ ಸಾಧ್ಯತೆ ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ