Belagavi NewsBelgaum NewsKannada NewsKarnataka NewsNationalPolitics

*ಆಗಸ್ಟ್ 21 ರಂದು ಭಾರತ್‌ ಬಂದ್‌ ಗೆ ಕರೆ*

ಪ್ರಗತಿವಾಹಿನಿ ಸುದ್ದಿ: ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸಿ ಆಗಸ್ಟ್ 21ರ ಬುಧವಾರದಂದು ಭಾರತ್‌ ಬಂದ್‌ ಘೋಷಿಸಲಾಗಿದೆ.

ದೇಶದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ದಲಿತರು ಬುಧವಾರ ಪ್ರತಿಭಟನೆ ನಡೆಸಲಿದ್ದಾರೆ. ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಪದಾಧಿಕಾರಿಗಳು ಜಗದಲ್‌ಪುರದ ಎಲ್ಲಾ ಅಧಿಕಾರಿಗಳಿಗೆ ಮತ್ತು ವಿವಿಧ ಸಂಘಟನೆಗಳಿಗೆ ಪತ್ರದ ಮೂಲಕ ಆಗಸ್ಟ್ 21 ರಂದು ಭಾರತ್ ಬಂದ್‌ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸಣ್ಣ ವ್ಯಾಪಾರಿಗಳ ಸಂಘ, ಸಾರಿಗೆ ಸಂಘ, ಟ್ಯಾಕ್ಸಿ ಇತ್ಯಾದಿ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಆ. 21 ರಂದು ಬೆಳಿಗ್ಗೆ 5 ರಿಂದ ಸಂಜೆ 5 ರವರೆಗೆ ಎಲ್ಲ ವಿಭಾಗವನ್ನು ಮುಚ್ಚಲಾಗುವುದು ಎಂದು ಸರ್ವ ಆದಿವಾಸಿ ಸಮಾಜದ ವಿಭಾಗೀಯ ಅಧ್ಯಕ್ಷ ಪ್ರಕಾಶ್ ಠಾಕೂರ್ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಸಮಾಜದ ಜಿಲ್ಲಾಧ್ಯಕ್ಷ ವಿಕ್ರಂ ಲಹಾರೆ ಮಾತನಾಡಿ, ಬಂದ್‌ ವೇಳೆ ನಮ್ಮ ಯುವಕರು ಬೆಳಗ್ಗೆಯಿಂದಲೇ ಬೈಕ್ ನಲ್ಲಿ ಸಂಚರಿಸಿ, ಬಳಿಕ ಧರಮಪುರ ಪಿ.ಜಿ.ಕಾಲೇಜು ಬಳಿ ಒಗ್ಗೂಡಿ ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಲಾಲ್ ಬಾಗ್ ಮೈದಾನ ತಲುಪಲಿದ್ದಾರೆ ಎಂದು ಹೇಳಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button