ಎಲ್ಲಾ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ರದ್ದು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ರಾಜ್ಯದ ಎಲ್ಲಾ ನಿಗಮ, ಮಂಡಳಿ, ಪ್ರಾಧಿಕಾರ, ಆಯೋಗಗಳ ಅಧಿಕಾರೇತರ ಅಧ್ಯಕ್ಷರ ನೇಮಕಗಳನ್ನು ರದ್ದುಗೊಳಿಸಲಾಗಿದೆ.
ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಹಿಂದಿನ ಮೈತ್ರಿ ಸರಕಾರ ನೇಮಕ ಮಾಡಿದ್ದ ಎಲ್ಲಾ ನಿಗಮ ಮಂಡಳಿಗಳ ಚೇರಮನ್ ಹುದ್ದೆಗಳನ್ನು ರದ್ಧುಗೊಳಿಸಲು ಸೂಚಿಸಲಾಗಿದೆ.
ಮುಂದಿನ ಆದೇಶ ಬರುವವರೆಗೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯನ್ನು ಈ ಎಲ್ಲ ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಆಯೋಗಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಲಾಗಿದೆ.
ಬಿಜೆಪಿ ಸರಕಾರ ಬಿಜೆಪಿ ಕಾರ್ಯಕರ್ತರನ್ನು ಈ ಎಲ್ಲ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಿದೆ.
ಈಗಾಗಲೆ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕ ಆದೇಶ ತಡೆಹಿಡಿದಿದ್ದನ್ನು, ವರ್ಗಾವಣೆ ಆದೇಶ ಮತ್ತು ಕಾಮಗಾರಿ ಆದೇಶಗಳನ್ನು ತಡೆಹಿಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ –
ಬಿಜೆಪಿ ಸರಕಾರದಿಂದ ಮತ್ತೊಂದು ಶಾಕ್
ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ