
ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿಹೊಡೆದ ಪರಿಣಾಮ ಕಾರಿನ ಅರ್ಧದಷ್ಟು ಭಾಗ ಟ್ರಕ್ ಒಳಗೆ ಹೊಕ್ಕಿದ್ದು, ಕಾರಿನಲ್ಲಿದ್ದ ಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಿಹಾರದ ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಉದ್ಯಮಿಗಳಾದ ರಾಜೇಶ್ ಕುಮಾರ್ (55), ಸಂಜಯ್ ಸಿಂಗ್ (50), ಕಮಲ್ ಕಿಶೋರ್ (38) ಪ್ರಕಾಶ್ ಚೌರಾಸಿಯಾ (35) ಮತ್ತು ಸುನೀಲ್ ಕುಮಾರ್ (38) ಮೃತರು ಎಂದು ಗುರುತಿಸಲಾಗಿದೆ.
ಪರ್ಸಾ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.