Latest

*ಮರಕ್ಕೆ ಕಾರು ಡಿಕ್ಕಿ ಪ್ರಕರಣ: ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿಇದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಏಳು ಜನ ಯುವಕರ ಗುಂಪು ಸ್ವಿಫ್ಟ್ ಕಾರಿನಲ್ಲಿ ಸವಣೂರಿನ ಬೇವಿನಹಳ್ಳಿಯಿಂದ ಬೆಳಗಾವಿ ಜಿಲ್ಲೆಯ ನಂದಗಡಕ್ಕೆ ತೆರಳುತ್ತಿದ್ದರು. ಈ ವೇಳೆ ಇಂದು ಮುಂಜಾನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ಇಬ್ಬರು ಯುವಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಮೃತ ಯುವಕರನ್ನು ನೀಲಪ್ಪ ಮೂಲಿಮನಿ (23), ಸುದೀಪ್ ಕೋಟಿ (18), ಶಿವನಗೌಡ ಯಲ್ಲನಗೌಡ್ರ (20), ಕಲ್ಮೇಶ ಮಾನೋಜಿ (26) ಎಂದು ಗುರುತಿಸಲಾಗಿದೆ.

Related Articles

Back to top button